ಅವರಾದಿಯಲ್ಲಿ ವಿದ್ಯಾರ್ಥಿಗಳ ವಿವೇಕಾನಂದರ ವೇಷಭೂಷಣ ಗಮನ ಸೆಳೆಯಿತು.
ಮೂಡಲಗಿ: ತಾಲ್ಲೂಕಿನ ಅವರಾದಿ ಶ್ರೀ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ 163 ನೇ ಜನ್ಮದಿನಾಚರಣೆಯಲ್ಲಿ ಶಾಲೆಯ ಮಕ್ಕಳ ವಿವೇಕಾನಂದರ ವೇಷಭೂಷಣ ಎಲ್ಲರ ಗಮನ ಸೆಳೆಯಿತು.
ಶಾಲೆಯ ಮುಖ್ಯ್ಯೊಪಾಧ್ಯಯ ಎ. ಪಿ. ಬಿ||ಪಾಟೀಲ ಮಾತಾನಾಡಿ, ವಿವೇಕಾನಂದರ ತತ್ವನುಡಿಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿ ಬಸವಾನಂದ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಿದ್ಧಾರೂಢ. ಮುಗಳಖೊಡ ಮಾತನಾಡುತಾ ವಿವೇಕಾನಂದರ ಬಾಲ್ಯ ಜೀವನ ಮತ್ತು ಅವರ ತತ್ವನುಡಿಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವರಿಸಿದರು.
ಶಿಕ್ಷಕ ಎ.ಬಿ.ಹುಕ್ಕೇರಿ ಹಾಗೂ ಸಂಸ್ಥೆಯ ಕಾರ್ಯದರ್ಶಿ ಎಮ್.ಬಿ.ಪಾಟೀಲ ಮತ್ತು ವಿದ್ಯಾರ್ಥಿಗಳು ಮಾತನಾಡಿದರು,
ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ
ಶಿಕ್ಷಕರಾದ ಕುಮಾರಿ ಎಸ್. ಎಸ್. ಪಾಟೀಲ ಸ್ವಾಗತಿಸಿದರು, ಪಿ. ಆರ್. ಜಕ್ಕಣ್ಣವರ, ಬಿ. ಎಲ್. ನಾಯಿಕ್ ಹಾಗೂ ಶ್ರೀಮತಿ ಜೆ. ಆರ್. ನದಾಫ್ ನಿರೂಪಿಸಿದರು, ಶ್ರೀಮತಿ ಎಸ್. ವೈ. ದೊಡ್ಡಮನಿ ವಂದಿಸಿದರು ಫೋಟೋ ಕ್ಯಾಪ್ಸನ್> ಮೂಡಲಗಿ: ತಾಲೂಕಿನ ಅವರಾದಿ ಶ್ರೀ ಮಹಾಲಕ್ಷ್ಮೀ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರದಂದು ಜರುಗಿದ ಸ್ವಾಮಿ ವಿವೇಕಾನಂದರ 163 ನೇ ಜನ್ಮದಿನಾಚರಣೆಯಲ್ಲಿ ಶಾಲೆಯ ಮಕ್ಕಳ ವಿವೇಕಾನಂದರ ವೇಷಭೂಷಣ ಎಲ್ಲರ ಗಮನ ಸೆಳೆಯಿತು.