ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಬಳಿಗಾರ ದ್ವಿತೀಯ ಸ್ಥಾನ
ಮೂಡಲಗಿ: ತುಮಕೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಸಾಂಸ್ಕøತಿಕ ಭಕ್ತಿಗೀತೆಯ ಸ್ಪರ್ಧೆಯಲ್ಲಿ ಮೂಡಲಗಿ ತಾಲೂಕಿನ ಯಾದವಾಸ ಜಿಎನ್‍ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ದ್ವಿತೀಯ ವಿದ್ಯಾರ್ಥಿ ಬಸವರಾಜ ಈರಪ್ಪ ಬಳಿಗಾರ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಎಸ್ ಎಸ್ ಕಣಬೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಮಟ್ಟದ ಸಾಂಸ್ಕøತಿಕ ಭಕ್ತಿಗೀತೆಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ ಬಸವರಾಜ ಈರಪ್ಪ ಬಳಿಗಾರ ಹಾಗೂ ಸಾಧಕ ವಿದ್ಯಾರ್ಥಿಯ ಮಾರ್ಗದರ್ಶಕರಾದ ಶ್ರೀಮತಿ ಪಿ.ಪಿ.ಕಣವಿ, ಪಿ.ಎಚ್.ಚಿಕ್ಕೆಗೌಡರ ಉಪನ್ಯಾಸಕರಿಗೆ ವಿದ್ಯಾರ್ಥಿಯು ಚಿಕ್ಕೋಡಿ ಶ್ಯೈಕ್ಷಣಿಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಆಯ್. ಭಂಡಾರಿ ಹಾಗೂ ಶೀಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಉಪನ್ಯಾಸಕ ವೃಂದದವರು ಹರ್ಷ ವ್ಯಕ್ತಡಿಸಿ ಅಭಿನಂದಿಸಿದ್ದಾರೆ.