*31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಕಟ*
ಮೂಡಲಗಿ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಜಿಲ್ಲಾ ಘಟಕ ಬೆಳಗಾವಿ ಇವರು ಕೊಡಮಾಡುವ 2025 ಸಾಲಿನ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ರಾಜ್ಯದ ಮೂವತ್ತೊಂದು ಸಾಧಕರಿಗೆ ಮತ್ತು ಒಂದು ಸಂಘಿಕ ಪ್ರಶಸ್ತಿಯನ್ನು ಘೋಷಣೆ ಮಾಡಿ ರಾಜ್ಯಾಧ್ಯಕ್ಷರಾದ ಡಾ ಎಸ್ ಬಾಲಾಜಿ ಅದೇಶಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.
ಚೇತನಾ ಮರಾಠಿ ಉತ್ತರ ಕನ್ನಡ ಜಿಲ್ಲೆ, ಅಭಿಷೇಕ ಕುಮಾರ್ ಬೆಂಗಳೂರು ಗ್ರಾಮಾಂತರ, ನಾಗರಾಜ. ಎ ದಾವಣಗೆರೆ, ಶರತ್. ಪಿ ಶಿವಮೊಗ್ಗ, ಮಂಜೇಶ. ಕೆ ಮೈಸೂರು, ಮಹೇಶ ಕುಮಾರ್ ರಾಯಚೂರು ಜಿಲ್ಲೆ, ಅಭಿಷೇಕ ಶೆಟ್ಟಿ ಚಿಕ್ಕಮಂಗಳೂರು, ರವಿ ವಾಳದ ಧಾರವಾಡ, ಅಭಿಷೇಕ್ ಮುಟಗಾರ ಗದಗ, ಶಿವಾನಂದ ತುಮಕೂರು, ದರ್ಶನ್ ಚಿತ್ರದುರ್ಗ, ಐಜಾಜ್ ಅಹ್ಮದ್ ವಿಜಯಪುರ, ಕೆ. ಸಿ. ಭರತ್ ಕುಮಾರ್ ನಾಯ್ಡು ಬೆಂಗಳೂರು ನಗರ, ಪ್ರವೀಣ್ ಕುಮಾರ್ ಟಿ ಮಂಡ್ಯ, ರಾಜೇಶ್ ಮಯೂರ ದಕ್ಷಿಣ ಕನ್ನಡ, ಸಾಹಿಲ್ ಚವಾನ್ ಬೆಳಗಾವಿ, ಆಕಾಶ್ ಸಿ ಓ ಕೋಲಾರ, ನಿಂಗಣ್ಣ ಮಜಲಾಪುರ ಯಾದಗಿರಿ, ಚನ್ನವೀರ ಕಣ್ಣಗಿದಿಗ್ಗಾವ್
ಗುಲಬರ್ಗಾ, ಸಂಜು ಅಂಗಡಿ ಹಾವೇರಿ, ರಾಜಕುಮಾರ ಮುರೆ ಬೀದರ್, ವಿನಯ ಉಡುಪಿ, ಶ್ರೀಮತಿ ಸಂಗೀತಾ ಕೊಪ್ಪಳ, ಪಿ ಎಚ್ ಭರತ್ ಕುಮಾರ್ ಚಿಕ್ಕಬಳ್ಳಾಪುರ, ಕೆ ಎಸ್ ದರ್ಶನ್ ಕೊಡಗು, ಸಚಿನ್ ಕುಮಾರ ಎಸ್ ಜಿ ಹಾಸನ, ಪುನೀತ್ ಎಸ್ ಚಾಮರಾಜನಗರ, ಸಂಜಯ ಗೋಟೆ ಬಾಗಲಕೋಟ, ರಾಮು ಎ ಎಸ್ ರಾಮನಗರ, ಹನುಮಂತಯ್ಯ್ ದೊಡ್ಡಬಸಪ್ಪ ಬಳ್ಳಾರಿ, ಶ್ರೀಮತಿ ಪಿ ಅಂಜು ವಿಜಯನಗರ, ವಿಠ್ಠಲ್ ಪೂಜೇರಿ ಚಿಕ್ಕೋಡಿ, ಮಾತೃಭೂಮಿ ಯುವಕರ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾಧಕರಿಗೆ ಪ್ರಶಸ್ತಿಯನ್ನು ಅರಭಾವಿ ಶಾಸಕರು ಹಾಗೂ ಬೆಳಗಾವಿ ಕೆ ಎಮ್ ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ದಿನಾಂಕ 27 – 1 – 2025 ರಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಹಾಗೂ ಸಾoಸ್ಕೃತಿಕ ಸಮಾಜ ಸೇವಾ ಸಂಘ, ಶ್ರೀ ಮಹಾಲಕ್ಷ್ಮಿ ದೇವಿ ಡೊಳ್ಳು ಕುಣಿತ ಕಲಾ ಸಂಘ ಮತ್ತು ಇಟ್ಟಪ್ಪ ದೇವರ ಅಭಿವೃದ್ಧಿ ಸೇವಾ ಸಮಿತಿ ಹಳ್ಳೂರ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಜಾನಪದ ಯುವ ಕಲಾ ಸಮ್ಮೇಳನದಲ್ಲಿ ಸಂಗೊಳ್ಳಿ ರಾಜ್ಯ ಯುವ ಪ್ರಶಸ್ತಿಯನ್ನು 31 ಜಿಲ್ಲೆಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕಾರ್ಯಕ್ರಮದ ರೂವಾರಿ ಸಿದ್ದಣ್ಣ ದುರದುಂಡಿ ತಿಳಿಸಿದ್ದಾರೆ.