ಚೈತನ್ಯ ಸೊಸಾಟಿಗೆ ಅಧ್ಯಕ್ಷರಾಗಿ ಕೆಂಚರಡ್ಡಿ, ಉಪಾಧ್ಯಕ್ಷರಾಗಿ ಗಾಣಿಗೇರ ಅವಿರೋಧ ಆಯ್ಕೆ
ಮೂಡಲಗಿ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಚೈತನ್ಯ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ಮುಂದಿನ ಐದು ವರ್ಷಗಳ ಅವಧಿಗೆ ಶುಕ್ರವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸೊಸಾಟಿಯ ಸಂಸ್ಥಾಪಕ ಅಧ್ಯಕ್ಷ-ಉಪಾಧ್ಯಕ್ಷರಾದ 6ನೇ ಬಾರಿಗೆ ಅಧ್ಯಕ್ಷರಾಗಿ ತಮ್ಮಣ್ಣಾ ಬಾಲಪ್ಪಾ ಕೆಂಚರಡ್ಡಿ ಮತ್ತು ಉಪಾಧ್ಯಕ್ಷರಾಗಿ ಹಣಮಂತ ಚನ್ನಬಸಪ್ಪಾ ಗಾಣಿಗೇರ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾಧಿಕಾರಿ ಗೋಕಾಕ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುರೇಶ ಬಿರಾದಾರಪಾಟೀಲ, ಸಹಾಯಕ ಚುನಾವಣಾಧಿಕಾರಿಯಾಗಿ ಸೊಸಾಯಿಟಿಯ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಬಿಚಗುಪ್ಪಿ ಕಾರ್ಯ ನಿರ್ವಹಿಸಿದ್ದರು.
ಈ ಸಮಯದಲ್ಲಿ ಸೊಸಾಯಿಟಿಯ ನಿರ್ದೇಶಕರಾದ ಉದಯಕುಮಾರ ಜೋಕಿ, ವಿಜಯ ಹೊರಟ್ಟಿ, ಉದ್ದಪ್ಪ ಬಬಲಿ, ಗಿರಿಗೌಡ ಪಾಟೀಲ, ಶಾಂತಾ ಮೂಡಲಗಿ, ಸಾವಿತ್ರಿ ಬಬಲಿ, ಭಾರತಿ ಪಾಟೀಲ, ಮಾಲಾ ಗುಳನ್ನವರ, ಗೀತಾ ತೇಲಿ, ಲಕ್ಷ್ಮವ್ವಾ ಮಾಸನ್ನವರ ಮತ್ತಿತರರು ಉಪಸ್ಥಿತರಿದ್ದರು.
ಸೊಸಾಯಿಟಿಗೆ ಆರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.