Breaking News
Home / ಬೆಳಗಾವಿ / 31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ಎಸ್ ಬಾಲಾಜಿ ಅಭಿಮತ

31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ಎಸ್ ಬಾಲಾಜಿ ಅಭಿಮತ

Spread the love

*31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ ಎಸ್ ಬಾಲಾಜಿ ಅಭಿಮತ,

ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ*

ಮೂಡಲಗಿ : ಯುವ ಶಕ್ತಿ ದೇಶದ ಪ್ರಚಂಡ ಶಕ್ತಿ ಜಾನಪದರು ಯುವ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಜ್ಯಾಧ್ಯಕ್ಷ ಡಾ ಎಸ್ ಬಾಲಾಜಿ ಅಭಿಪ್ರಾಯ ಪಟ್ಟರು
ಅವರು ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರ ‌.ಜಿಲ್ಲಾ ಘಟಕ ಬೆಳಗಾವಿ.
ಶ್ರೀಮಹರ್ಷಿ ವಾಲ್ಮೀಕಿ ಕ್ರೀಡ ಹಾಗೂ ಸಾಂಸ್ಕೃತಿಕ ಸಮಾಜ ಸೇವಾ ಸಂಘ ಶ್ರೀ ಮಹಾಲಕ್ಷ್ಮಿ ಡೊಳ್ಳು ಕುಣಿತ ಕಲಾ ಸಂಘ ಹಾಗೂ ಶ್ರೀ ಇಟ್ಟಪ್ಪ ದೇವರ ಅಭಿವೃದ್ಧಿ ಸೇವಾ ಸಮಿತಿ ಹಳ್ಳೂರ. ಇವರುಗಳ ಸಂಯುಕ್ತ ಆಶ್ರಯದಲ್ಲಿ
ರಾಜ್ಯ ಮಟ್ಟದ ಜಾನಪದ ಯುವ ಕಲಾ ಮೇಳ ಹಾಗೂ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಸೈನಿಕರಾದ ಶ್ರೀಶೈಲ ಭಜಂತ್ರಿ ಮಾತನಾಡಿ ಹಳ್ಳಿಗಾಡಿನ ಬದುಕು ಜಾನಪದ ಸಾಹಿತ್ಯದ ಮೂಲ. ಜಾನಪದ ಸಾಹಿತ್ಯದಲ್ಲಿ ಮೂಲ ಶಿಕ್ಷಣದ ಪಾಠ ಇವೆ. ಮನುಷ್ಯನ ಅರಿವನ್ನು ವಿಸ್ತರಿಸಲು ಈ ಸಾಹಿತ್ಯ ಪೂರಕವಾಗಿದೆ. ನಮ್ಮ ಪೂರ್ವಜರು ಜಾನಪದ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ ಎಂದರು.
ಮೂಲಪಿಠ ಮುಮ್ಮೆಟ ಗುಡ್ಡದ ಪೂಜ್ಯಶ್ರೀ ಅವಧುತಸಿದ್ದ ಸ್ವಾಮೀಜಿ ಮಾತನಾಡಿ ಕೋಣೆ ಶಿಶು ಕೊಳಿತು, ಓಣಿ ಶಿಶು ಬೆಳಿತು ಎಂಬ ಗಾದೆ ಮಾತುಗಳು ಮಕ್ಕಳ ಬೆಳವಣಿಗೆಯನ್ನು ಹೇಳಿದೆ. ಜಾನಪದ ಸಾಹಿತ್ಯ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ನಮ್ಮ ಜಾನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು. ಜಾನಪದ ಗೀತೆ, ಗಾದೆ, ಒಗುಟುಗಳನ್ನು ಸಂಗ್ರಹಿಸುವ ಕಾರ್ಯವಾಗಬೇಕು’ ಎಂದರು.

ರಾಷ್ಟ್ರಿಯ ಯುವ ಪ್ರಶಸ್ತಿ ಪುರಸ್ಕೃತ ಮಲ್ಲೇಶ ಚೌಗಲಾ ಮಾತನಾಡಿ ಒಂದು ಕಾರ್ಯಕ್ರಮ ಯಶಸ್ವಿಯಾಗಿ ನಡೆಬೇಕಾದರೆ ಸಂಘಟಕರ ಪಾತ್ರ ಮಹತ್ವದಾಗಿದೆ ಆ ನಿಟ್ಟಿನಲ್ಲಿ ನಮ್ಮ ಯುವ ಸಂಘಟಕ ಮತ್ತು ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ ಅವರ ನಿರಂತರ ಸಂಘಟನೆ ಮತ್ತು ನಿಶ್ವಾರ್ಥ ಸೇವೆ ನಿಜವಾಗಲು ಶ್ಲಾಘನಿಯವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಯ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಯನ್ನು ಗಣ್ಯರು ಪ್ರಧಾನ ಮಾಡಿದರು. ವೇದಿಕೆಯಲ್ಲಿ ಸಂಗೊಳ್ಳಿ ರಾಯಣ್ಣ ಯುವ ಅಧ್ಯಕ್ಷ ಯಲ್ಲು ಬೊಮ್ಮನಹಳ್ಳಿ, ನಾಗನೂರಿನ ಕಾವ್ಯಶ್ರೀ ಅಮ್ಮನವರು, ಪುರಸಭೆ ಅಧ್ಯಕ್ಷರಾದ ಖುರ್ಷಾದ್ ನದಾಫ್, ಗ್ರಾಮ ಪಂಚಾಯತ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಮಾಜಿ ಜಿ ಪಂ ಸದಸ್ಯರಾದ ವಸಂತಿ ತೇರದಾಳ, ಸವಿತಾ ಡಬ್ಬಣ್ಣವರ,ರಾಜ್ಯ ಯುವ ಪ್ರಶಸ್ತಿ ವಿಜೇತ ಸುಭಾಷ ಗೂಡ್ಯಾಗೋಳ ಲಕ್ಕಪ್ಪ ದುರದುಂಡಿ, ಸಂಗಪ್ಪ ಪೂಜೇರಿ, ಸದಾಶಿವ ದುರದುಂಡಿ, ರಮೇಶ ದುರದುಂಡಿ, ಅಜರುದಿನ್ ಶೇಖಜಿ, ಮಹಾದೇವ ದುರದುಂಡಿ, ಸತೀಶ ಹೊಸಪೇಟಿ, ಮುಂತಾದವರು ಉಪಸ್ಥಿತರಿದ್ದರು. ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಸ್ವಾಗತಿಸಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ನಾಗೇಂದ್ರ ಚೌಗಲಾ ನಿರೂಪಿಸಿದರು. ರಾಜ್ಯ ಯುವ ಪ್ರಶಸ್ತಿ ವಿಜೇತರಾದ ರಾಘವೇಂದ್ರ ಲಂಬುಗೊಳ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ