ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಫೆ.4ರಂದು ಮೂಡಲಗಿ ಪಟ್ಟಣದಲ್ಲಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರರ 31 ನೇ ಜಾತ್ರಾ ಮಹೋತ್ಸವವು ಫೆ.4ರಂದು ನಡೆಯಲಿದೆ.
ಅಂದು ಮುಂಜಾನೆ 5ಗಂಟೆಗೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪಲ್ಲಕ್ಕಿ ಉತ್ಸವ, ಪುರವಂತರ ಸೇವಾ ಗುಗ್ಗಳ ಮಹೋತ್ಸವ ಜರುಗುವದು.
ಪಲ್ಲಕ್ಕಿ ಉತ್ಸವವು ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟು ಬಸವೇಶ್ವರ ಕಲ್ಯಾಣ ಮಂಟಪದಿಂದ ಬಸವೇಶ್ವರ ವೃತ್ತ, ಗಾಂಧಿಚೌಕ, ರೇವಣಸಿದ್ದೇಶ್ವರ ಗುಡಿ, ಶಿವಬೋಧರಂಗ ಮಠಕ್ಕೆ ಹೋಗಿ ಅಲ್ಲಿಂದ ಮರಳಿ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ಮಂಗಲ ಕಾರ್ಯ ಬಳಿಕ ಅನ್ನಪ್ರಸಾದದೊಂದಿಗೆ ಮುಕ್ತಾಯಗೊಳ್ಳುವದು ಎಂದು ಜಾತ್ರಾ ಕಮಿಟಿ ತಿಲಿಸಿದೆ.