Breaking News
Home / ಬೆಳಗಾವಿ / ಕುಲಗೋಡ ಗ್ರಾಮದಲ್ಲಿ ’18ನೇ ವರ್ಷದ ಪಾರಿಜಾತ ಉತ್ಸವ’

ಕುಲಗೋಡ ಗ್ರಾಮದಲ್ಲಿ ’18ನೇ ವರ್ಷದ ಪಾರಿಜಾತ ಉತ್ಸವ’

Spread the love

ಕುಲಗೋಡ ಗ್ರಾಮದಲ್ಲಿ ’18ನೇ ವರ್ಷದ ಪಾರಿಜಾತ ಉತ್ಸವ’

ಮೂಡಲಗಿ : ಪ್ರತಿ ವರ್ಷದಂತೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಶ್ರೀಕೃಷ್ಣ ಪಾರಿಜಾತ ತವರೂರಾದ ಕುಲಗೋಡ ಗ್ರಾಮದ ಕುಲಗೋಡ ತಮ್ಮಣ್ಣ ಬಯಲು ರಂಗ ಮಂದಿರದಲ್ಲಿ, ಶುಕ್ರವಾರ ದಿ.7ರಂದು ಸಾಯಂಕಾಲ 6ಗಂಟೆಗೆ, 18ನೇ ವರ್ಷದ ಪಾರಿಜಾತ ಉತ್ಸವ ಜರುಗಲಿದೆ ಎಂದು ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ  ಪ್ರತಿಷ್ಠಾನದ  ಸಂಸ್ಥಾಪಕ ಅಧ್ಯಕ್ಷರಾದ ರಮೇಶ ಲವಪ್ಪ ಕೌಜಲಗಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ,ಎಚ್.ಭಜಂತ್ರಿ, ಮುಖ್ಯ ಅತಿಥಿಯಾಗಿ ಡಾ.ಶ್ರೀರಾಮ ಇಟ್ಟಣ್ಣವರ, ಶ್ರೀಕಾಂತ ನಾಯಕ, ಅಶೋಕ್ ನಾಯಕ, ಡಾ.ಬಿ.ವಿ.ದೇವರ, ಬಸನಗೌಡ ಪಾಟೀಲ್, ಸುಭಾಸ್ ವಂಟಗೋಡಿ, ಸತೀಶ್ ವಂಟಗೋಡಿ, ಸುನಿಲ್ ವಂಟಗೋಡಿ, ಗೋವಿಂದ ಕೊಪ್ಪದ ಸೇರಿದಂತೆ ಗ್ರಾಮದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಉತ್ಸವದ ಮುಖ್ಯ ಭಾಗವಾಗಿ ಶ್ರೀ ಬಲಭೀಮ   ಕೃಪಾಪೋಷಿತ  ಕುಲಗೋಡ ತಮ್ಮಣ್ಣ ಶ್ರೀ ಕೃಷ್ಣ ಪಾರಿಜಾತ ಕಂಪನಿ ನಾಮ ಫಲಕವನ್ನು ಶ್ರೀ ಬಲಭೀಮ ದೇವರ ಪ್ರಧಾನ ಅರ್ಚಕರಾದ ಶ್ರೀ ಭೀಮಪ್ಪ.ರಾ.ಪೂಜೇರ ಲೋಕಾರ್ಪಣೆಗೊಳಿಸಲಿದ್ದು, ಕುಲಗೋಡ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಜನ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ತಿಳಿಸಿದ್ದಾರೆ.


Spread the love

About inmudalgi

Check Also

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ