Breaking News
Home / ಬೆಳಗಾವಿ / ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ

ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ

Spread the love

ಶೈಕ್ಷಣಿಕ ಬಲವರ್ಧನಗೆ ಕಲಿಕಾ ಹಬ್ಬ ಪೂರಕ: ಅಂಗಡಿ

ಮೂಡಲಗಿ 10: ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಷೇಶವಾಗಿ ಮೂಲಭೂತ ಸಾಕ್ಷರತೆ ಮತ್ತು ತಂತ್ರಜ್ಞಾನದ ಚಟುವಟಿಕೆಗಳ ಬಲವರ್ದನೆಗೆ ಕಲಿಕಾಹಬ್ಬ ಪೂರಕ ಹಾಗೂ ಸಂತೋಷದಾಯಕ ಕಲಿಕಾ ವಾತಾವರಣ ಪ್ರೇರೆಪಿಸುತ್ತದೆ ಎಂದು ಕಲ್ಲೋಳಿ ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಅಂಗಡಿ ಹೇಳಿದರು. ಅವರು ತುಕ್ಕಾಟ್ಟಿಯ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲೋಳಿ ಸಮೂಹ ಸಂಪನ್ಮೂಲ ಕೇಂದ್ರಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಕಲೆ ಕುಶಲತೆ ಆದಾರಿತ ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಕಲಿಕೆಯನ್ನು ಮೋಜಿನೊಂದಿಗೆ ಸಂಯೋಜಿಸಲು ನೆರವಾಗುತ್ತವೆ ಎಂದರು.
ಗ್ರಾಮ ಪಂಚಾಯತ ಉಪಾದ್ಯಕ್ಷೆ ಸುನಂದಾ ಭಜಂತ್ರಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳು ಸಿಗುತ್ತಿರುವದರಿಂದ ವಿದ್ಯಾರ್ಥಿಗಳು ಅದರ ಲಾಭ ಪಡೆಯದುಕೊಂಡು ಭವಿಷ್ಯ ಕಟ್ಟಿಕೊಳ್ಳಬೆಕೆಂದರು. ಹಾಗೂ ಎಲ್ಲ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿಯೇ ಕಲಿಯಬೇಕೆಂದು ಕಿವಿಮಾತು ಹೇಳಿದರು. ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಶಾಲೆಯ ಕಾರ್ಯ ವೈಖರಿ ತುಂಬಾ ಶ್ಲಾಘನೀಯ ಎಂದರು,
ಗ್ರಾಮ ಪಂಚಾಯತ ಅಧ್ಯಕ್ಷರಾದ ಗಾಯತ್ರಿ ಬಾಗೇವಾಡಿ ಹಾಗೂ ಜನಪ್ರತಿನಿಧಿಗಳು ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಗುರುಗಳಾದ ಎ.ವ್ಹಿ. ಗಿರೆಣ್ಣವರ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಹಾಯ ನೀಡಿದ ಶಿಕ್ಷಕರಾದ ಪುಷ್ಪಾ ಭರಮಧೆ, ದೇಶಪಾಂಡೆ, ಎಸ್.ಎಸ್. ನಾಯಕವಾಡಿ, ಬಿ.ಆರ್.ಪಿ ಎಮ್.ಕೆ, ಕಮ್ಮಾರ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗಾಯತ್ರಿ ಬಾಗೇವಾಡಿ ಉಪಾದ್ಯಕ್ಷೆ ಸುನಂದಾ ಭಜಂತ್ರಿ ಮಾಜಿ ಅಧ್ಯಕ್ಷರಾದ ಕುಮಾರ ಮರ್ದಿ, ಮಾಜಿ ಉಪಾಧ್ಯಕ್ಷರಾದ ಭರಮಣ್ಣ ಹರಿಜನ, ಆನಂದ ಉಪ್ಪಾರ ಎಮ್.ಕೆ.ಕಮ್ಮಾರ, ಎಸ್,ಎಸ್, ನಾಯಿಕವಾಡಿ, ಕೆ.ಬಿ. ಮಮದಾಪೂರ, ಬಸವಪ್ರಭು ಹಾದಿಮನಿ, ಸದಾಶಿವ ಬಸಲಿಂಗಗೋಳ, ದೀಪಾ ದoಡಿಗದಾಸರ, ಹಾಗೂ ಕಲ್ಲೋಳಿ ಕ್ಷಸ್ಟರ್‍ದ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

About inmudalgi

Check Also

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ