ಮೂಡಲಗಿ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಶ್ರೀಗಳು, ಅತಿಥಿಗಳು ಉದ್ಘಾಟಿಸಿದರು
ಮೂಡಲಗಿ: ‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕøತಿಯ ಅರಿವು ನೀಡಬೇಕು’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸುರೇಶ ಲಂಕೆಪ್ಪನ್ನವರ ಹೇಳಿದರು.
ಇಲ್ಲಿಯ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 17ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿಯ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಶ್ರದ್ಧೆ, ಪರಿಶ್ರಮ ಇದ್ದಲ್ಲಿ ಯಶಸ್ಸು ದೊರೆಯುತ್ತದೆ ಎಂದರು.
ಅತಿಥಿ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಇಂದಿನ ಮಕ್ಕಳು ನಾಳಿನ ಶ್ರೇಷ್ಠ ಪ್ರಜೆಗಳಾಗುತ್ತಾರೆ. ಮಕ್ಕಳನ್ನು ನಿರ್ಲಕ್ಷ ಮಾಡದೆ ಉತ್ತಮ ಶಿಕ್ಷಣದೊಂದಿಗೆ ಪ್ರೋತ್ಸಾಹ ನೀಡಿ ಅವರ ಪ್ರತಿಭೆಯನ್ನು ಅರಳಿಸಬೇಕು ಎಂದರು.
ಸಾಹಿತಿ ಪ್ರೊ. ಶಿವಾನಂದ ಬೆಳಕೂಡ ಮಾತನಾಡಿ ಮಕ್ಕಳಲ್ಲಿ ಸಾಹಿತ್ಯ ಓದಿನ ಒಲವು ಮೂಡಿಸಬೇಕು ಎಂದರು.
ನೀಲಕಂಠ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಈಶ್ವರ ಮುರಗೋಡ ಅಧ್ಯಕ್ಷತೆವಹಿಸಿದರು.
ಮುಖ್ಯ ಶಿಕ್ಷಕ ಎಂ.ಎ. ನದಾಫ್ ಪ್ರಾಸ್ತಾವಿಕ ಮಾತನಾಡಿ ಶಾಲೆಯ ಪ್ರಗತಿ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭೂದಾನಿ ಪಾರವ್ವ ಚನ್ನಪ್ಪ ಒಂಟಗೂಡಿ, ಶಿವಕುಮಾರ ಕೋಡಿಹಾಳ, ಕುರುಹಿಣಶೆಟ್ಟಿ ಸೊಸೈಟಿ ಅಧ್ಯಕ್ಷ ಸುಭಾಷ ಬೆಳಕೂಡ, ನಿರ್ದೇಶಕರಾದ ಬಸವಣ್ಣಿ ಮುಗಳಖೋಡ, ಜಿ.ಕೆ. ಮುರಗೋಡ, ಶಂಕರ ಬೆಳಕೂಡ, ಬಸವರಾಜ ಮುರಗೋಡ, ಮಲ್ಲಪ್ಪ ಒಂಟಗೂಡಿ, ಈಶ್ವರ ಮುಗಳಖೋಡ, ಈರಪ್ಪ ಚಿಪ್ಪಲಕಟ್ಟಿ, ರಮೇಶ ಒಂಟಗೂಡಿ, ಸಾಗರ ಬೆಳಕೂಡ, ವಿದ್ಯಾಶ್ರೀ ಮುರಗೋಡ, ಸಂಸ್ಥೆ ಉಪಾಧ್ಯಕ್ಷ ಸುರೇಶ ಬೆಳಕೂಡ, ಮೂಡಲಗಿ ಸಹಕಾರ ಬ್ಯಾಂಕ್ ನಿರ್ದೇಶಕ ರಾಚಪ್ಪ ಬೆಳಕೂಡ, ರವಿ ಜಾಧವ ಮತ್ತಿತರರು ಇದ್ದರು.
ಶ್ರೀದೇವಿ ತೇಗೂರ, ರೇಣುಕಾ ಕೋಚರಿ, ಮಹಾದೇವಿ ಕಂಬಾರ ನಿರೂಪಿಸಿದರು.