*ಯಲ್ಲಾಲಿಂಗ ವಾಳದ ಅವರಿಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಪ್ರದಾನ*
ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ ಅವರಾದಿಯ ಶ್ರೀ ಕವಿರತ್ನ ಕಾಳಿದಾಸ ಜಾನಪದ ಕಲಾ ಪೋಷಕ ಸಂಘ ಸುರೇಬಾನ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬೆಳ್ಳಿ ರಜತ್ ಮಹೋತ್ಸವದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಪ್ರಶಸ್ತಿ ಪ್ರದಾನ ಮಾಡಿದರು. ಯಲ್ಲಾಲಿಂಗ ವಾಳದ ಅವರು ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮಾಜ ಸೇವಾ ಸಂಘವನ್ನು ಹುಟ್ಟು ಹಾಕಿ ಅದರ ಮುಕಾಂತರ ಮಾಡಿದ ಹಲವಾರು ಸಮಾಜ ಮುಖಿ ಕಾರ್ಯ ಚಟುವಟಿಕೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಲಭಿಸಿದ ಪ್ರಯುಕ್ತ ಹಳ್ಳೂರ ರಾಜ್ಯ ಮಟ್ಟದ ಜಾನಪದ ಕಲಾ ಮೇಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಮ್ಮೆಟ ಗುಡ್ಡದ ಅವಧುತಸಿದ್ದ ಮಹಾರಾಜರು, ಮಾಜಿ ಸೈನಿಕ ಹಾಗೂ ಸಮಾಜ ಸೇವಕರು ಶ್ರೀಶೈಲ ಭಜಂತ್ರಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ, ಕಾವ್ಯಶ್ರೀ ಅಮ್ಮನವರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಾಸಂತಿ ತೇರದಾಳ, ಸವಿತಾ ಡಬ್ಬಣ್ಣವರ, ಮಾರುತಿ ಪ್ಯಾಟಿ, ಬಸವರಾಜ ಕೌಜಲಗಿ, ಶಿಕ್ಷಕ ಪ್ರಕಾಶ ಮೊರೆ ಹಾಗೂ ಸಂಘಟಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.