
*ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳು ಬೆಳೆಯಲಿ ಜಿಲ್ಲಾಧ್ಯಕ್ಷ ಸಿದ್ದಣ್ಣಾ *
ಮಾಂಜರಿ : ಗ್ರಾಮೀಣ ಮಟ್ಟದಲ್ಲಿ ಯುವಕ ಸಂಘಗಳು ಆಯೋಜಿಸುವ ಕ್ರೀಡಾಕೂಟಗಳು ಪ್ರತಿಭೆಗಳನ್ನು ಗುರುತಿಸುವುದಲ್ಲದೆ, ಗ್ರಾಮೀಣ ಜನರಿಗೆ ಉಲ್ಲಾಸದಾಯಕ ವಾತಾವರಣ ಕಲ್ಪಿಸಿಕೊಡುತ್ತವೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಸಿದ್ದಣ್ಣಾ ದುರದುಂಡಿ ಹೇಳಿದ್ದಾರೆ.

ಅವರು ಕಳೆದ ದಿನಾಂಕ 22 ರಂದು ಮಾಂಜರಿ ಗ್ರಾಮದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ. ಅಂಬೇಡ್ಕರ್ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ತಾಲೂಕಾ ಘಟಕ ಚಿಕ್ಕೋಡಿ. ಸರ್ವೋದಯ ಪದವಿ ಪೂರ್ವ ಮಹಾವಿದ್ಯಾಲಯ ಮಾಂಜರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಾ
ಗ್ರಾಮೀಣ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಯುವಕ ಸಂಘಗಳಿರುವಲ್ಲಿ ಉತ್ಸಾಹಿ ಯುವತಿ ಮಂಡಳಿ ಇದ್ದರೆ ಅಲ್ಲಿ ಸರ್ವಾಂಗೀಣ ಅಭಿವೃದ್ಧಿ ಕಾಣಲು ಸಾಧ್ಯ. ಎಂದು ಸಮಾಜ ಸೇವಕರಾದ ಸಿದ್ದಾರ್ಥ ಗಾಯಾಗೋಳ ಮಾಂಜರಿಯಲ್ಲಿ ಕೂಡ ಯುವತಿ ಮಂಡಳಿಯ ಅವಶ್ಯಕತೆಯಿದ್ದು ಉತ್ಸಾಹಿ ಯುವತಿಯರ ಸಂಘಟನೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಅನಿತಾ ಬಾಳಾಸಾಬ ದಯಾರಕರ ಅಧ್ಯಕ್ಷತೆ ವಹಿಸಿದ್ದರು.ವೇಧಿಕೆಮೇಲೆ ಅಂಕಲಿ ಪೊಲೀಸ್ ಠಾಣೆ ಎ ಎಸ ಐ ಕ.ಬಿ.ಹಾದಿಮನಿ. ಆರ.ಡಿ. ಕಧಂ, ಕೆ.ಎಸ ಸಾಳುಂಕೆ ಗಿರೀಶ್ ಬಿಸಲನಾಯ ಶ್ರೀಮತಿ ಕುಮುದಾ ನಾಯಿಕ, .ಎಂ.ಡಿ ಕಾಂಬಳೆ, ಚೇತನ ಸಾರಾಪೂರೆ, ಯಲ್ಲಾಲಿಂಗ ವಾಳದ, ರವೀಂದ್ರ ವಡವಡೆ ಹಾಗೂ ಶಾಲೆಯ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ರಾಘವೇಂದ್ರ ಲಂಬುಗೋಳ ಸ್ವಾಗತಿಸಿದರು. ಎಂ ಬಿ ಕೋಳಿ
ನಿರೂಪಿಸಿದರು. ವಂದಿಸಿದರು.
IN MUDALGI Latest Kannada News