ಮಾ. 3ರಂದು ಭಗೀರಥ ಪೀಠದ ಪುರಷೋತ್ತಾಮಾನಂದ ಸ್ವಾಮೀಜಿ ಆಗಮನ
ಮೂಡಲಗಿ: ತಾಲ್ಲೂಕಿನ ಹೊನಕುಪ್ಪಿಯ ಚಂದ್ರಮ್ಮದೇವಿ ಜಾತ್ರೆಯು ಶರಣ ಬಸಪ್ಪ ಅಜ್ಜನವರ ಸಾನ್ನಿಧ್ಯದಲ್ಲಿ ಫೆ. 27ರಿಂದ ಮಾ. 4ರ ವರೆಗೆ ಜರುಗಲಿದೆ.
ಫೆ. 27ರಂದು ಬೆಳಿಗ್ಗೆ 3ಕ್ಕೆ ಘಟಸ್ಥಾಪನೆ, ಸಂಜೆ 7ಕ್ಕೆ ಪ್ರವಚನ ಪ್ರಾರಂಭವಾಗುವುದು. ರಾತ್ರಿ 10ಕ್ಕೆ ಶ್ರೀಕೃಷ್ಣ ಪಾರಿಜಾತ ಇರುವುದು.
ಫೆ. 28ರಂದು ಸಂಜೆ 7ಕ್ಕೆ ಪ್ರವಚನ, ರಾತ್ರಿ 10ಕ್ಕೆ ನವಲಗುಂದದ ಇಮಾಮ್ ಸಾಬ ವಲ್ಲೆಪ್ಪನವರ ಅವರಿಂದ ತತ್ವ ಪದಗಳು ಇರುವವು. ಮಾ. 1ರಂದು 7ಕ್ಕೆ ಪ್ರವಚನ, ವಿವಿಧ ಭಜನಾ ತಂಡಗಳಿಂದ ಭಜನೆ ಇರುವುದು. ಮಾ. 2ರಂದು ಬೆಳಿಗ್ಗೆ ಹೊನಕುಪ್ಪಿ ಹಾಗೂ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳ ಆಗಮನ, ಸಂಜೆ 7ಕ್ಕೆ ಪ್ರವಚನ, ರಾತ್ರಿ 10ಕ್ಕೆ ಡೊಳ್ಳಿನ ಪದಗಳು ಇರುವವು. ಮಾ. 3ರಂದು ನಿರಂತರ ಪ್ರಸಾದವಿರುವುದು. ಬೆಳಿಗ್ಗೆ 8ಕ್ಕೆ ಮುತ್ತೈದೆಯರ ಉಡಿ ತುಂಬುವುದು, ಬೆಳಿಗ್ಗೆ 11.45ಕ್ಕೆ ಚಂದ್ರಮ್ಮಾದೇವಿ ಭವ್ಯ ಮೆರವಣಿಗೆ ಮತ್ತು ಪಲ್ಲಕ್ಕಿಗಳ ಉತ್ಸವ ಜರುಗುವುದು. ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮ ಸಭೆ ಜರುಗುದು. ರಾತ್ರಿ 10ಕ್ಕೆ ಜೈ ಗಣೇಶ ಮೆಲೋಡಿಜ್ ಅವರಿಂದ ರಸಮಂಜರಿ, ಹಾಸ್ಯ ಕಾರ್ಯಕ್ರಮ ಇರುವುದು. ಪ್ರತಿ ದಿನ ಪ್ರಸಾದ ಇರುವುದು ಮತ್ತು ಮಾ. 4ರಂದು ಮಹಾಪ್ರಸಾಸ ಇರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.