ವಿವಿಧೆಡೆ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಜಗದೀಶ ಶೆಟ್ಟರ ಚಾಲನೆ
ಮೂಡಲಗಿ: ತಾಲೂಕಿನಲ್ಲಿ ಬರುವಂತಹ 5 ಗ್ರಾಮಗಳಲ್ಲಿ ತಲಾ ರೂ.5 ಲಕ್ಷ ಅನುದಾನದಡಿಯಂತೆ ಒಟ್ಟು 25 ಲಕ್ಷ ರೂ. ಮೊತ್ತದ ಬೆಳಗಾವಿ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯ ಕಾಮಗಾರಿಗಳಿಗೆ ಬೆಳಗಾವಿ ಲೋಕಸಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಚಾಲನೆ ನೀಡಿದರು.
ತಾಲೂಕಿನಲ್ಲಿಯ ಹೊನಕುಪ್ಪಿಯ ಶ್ರೀ ಉದ್ದಮ್ಮ ದೇವಿ ದೇವಸ್ಥಾನ, ಬಳೋಬಾಳದ ಶ್ರೀ ಬಸವಯೋಗ ಮಂಟಪ, ಬಿಸನಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ, ಅರಳಿಮಟ್ಟಿಯ ಶ್ರೀ ಸದಾಶಿವ ಮಠದ ಹತ್ತಿರ ಹಾಗೂ ಅವರಾದಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಮುದಾಯ ಭವನ-ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಸಂಸದ ಜಗದೀಶ ಶೆಟ್ಟರ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳ ಆರಂಭಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾμï ಪಾಟೀಲ, ಪ್ರಮುಖರಾದ ಸರ್ವೋತ್ತಮ ಜಾರಕಿಹೊಳಿ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಆಯಾ ಗ್ರಾಮದ ಮುಖಂಡರು ಭಾಗವಹಿಸಿದ್ದರು.