Breaking News
Home / ಬೆಳಗಾವಿ / ‘ಮಕ್ಕಳು ದೇಶದ ಭವಿಷ್ಯದ ರೂವಾರಿಗಳು’-ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ

‘ಮಕ್ಕಳು ದೇಶದ ಭವಿಷ್ಯದ ರೂವಾರಿಗಳು’-ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ

Spread the love

ಲಕ್ಷ್ಮೀನಗರದ ಬಿಇಒ ಕಚೇರಿ ಬಳಿಯ ಅಂಗನವಾಡಿ ಕೇಂದ್ರಕ್ಕೆ ನಿಸರ್ಗ ಫೌಂಡೇಶನದಿಂದ ಮಕ್ಕಳ ಆಟಿಕೆ, ಖುರ್ಚಿಗಳನ್ನು ನೀಡಿದರು. ತಹಶೀಲ್ದಾರ ಶಿವಾನಂದ ಬಬಲಿ ಹಾಗೂ ತಾಲ್ಲೂಕು ಆಡಳಿತಾಧಿಕಾರಿಗಳು ಚಿತ್ರದಲ್ಲಿರುವರು.

‘ಮಕ್ಕಳು ದೇಶದ ಭವಿಷ್ಯದ ರೂವಾರಿಗಳು’-ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ

ಮೂಡಲಗಿ: ‘ಮಕ್ಕಳ ದೈಹಿಕ, ಮಾನಸಿಕ ಹಾಗೂ ಭಾವನಾತ್ಮ ಬೆಳವಣಿಗೆಯಲ್ಲಿ ಆರು ವರ್ಷಗಳ ಪೂರ್ವದ ಅವಧಿಯು ಮಹತ್ವದಾಗಿದೆ’ ಎಂದು ಮೂಡಲಗಿ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಯಲ್ಲಪ್ಪ ಗದಾಡಿ ಹೇಳಿದರು.
ಇಲ್ಲಿಯ ಲಕ್ಷ್ಮೀನಗರದ ಬಿಇಒ ಕಚೇರಿಯ ಬಳಿಯ ಅಂಗನವಾಡಿ ಕೇಂದ್ರಕ್ಕೆ ನಿಸರ್ಗ ಫೌಂಡೇಶನದವರು ಕಾಣಿಕೆ ನೀಡಿರುವ ಮಕ್ಕಳ ಆಟಿಕೆಗಳು, ಖುರ್ಚಿಗಳು, ಮಕ್ಕಳ ಸಮವಸ್ತ್ರಗಳ ವಿತರಣಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು
ಮಕ್ಕಳಿಗೆ ಬಾಲ್ಯದ ಅವಧಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ದೇಶದ ಭವಿಷ್ಯದ ರೂವಾರಿಗಳನ್ನು ರೂಪಿಸುವುದು ಅವಶ್ಯವಿದೆ ಎಂದರು.
ಈರಪ್ಪ ಢವಳೇಶ್ವರ ಮಾತನಾಡಿ ಜನರ ಸಹಕಾರ ಮತ್ತು ಸರ್ಕಾರಿ ಇಲಾಖೆಗಳ ಸಹಕಾರದಿಂದ ಮತ್ತು ನಿಸರ್ಗ ಫೌಂಡೇಶನದದ ಸದಸ್ಯರ ಸಹಾಯದಿಂದ ಸಸಿ ನೆಡುವಲಿಕ್ಕೆ ಸಾಧ್ಯವಾಗಿದ್ದು, ಈಗಾಗಲೇ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಿರುವ ತೃಪ್ತಿ ಇದೆ ಎಂದರು.
ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ದೇಶದ ಭವಿಷ್ಯದ ಚಿಗುರು ಅಂಗನವಾಡಿ ಕೇಂದ್ರದಿಂದ ಪ್ರಾರಂಭಗೊಳ್ಳುತ್ತದೆ. ಮಕ್ಕಳ ಬೆಳೆವಣಿಗೆಗೆ ಪ್ರಮುಖ್ಯ ನೀಡುವುದು ಅವಶ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಹಶೀಲ್ದಾರ್ ಶಿವಾನಂದ ಬಬಲಿ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲಕರ ಅವರು ಅಂಗನವಾಡಿ ಕೇಂದ್ರದ ಆವರಣದಲ್ಲಿ ಸಸಿಗೆ ನೀರೂಣಿಸಿ ಪರಿಸರ ಆಂದೋಲನಕ್ಕೆ ಚಾಲನೆ ನೀಡಿದರು.
ಈರಪ್ಪ ಢವಳೇಶ್ವರ ಅವರ ಪುತ್ರಿ ಸಾಧ್ವಿಯ 9ನೇ ವರ್ಷದ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಿದರು.
ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸಿಇಒ ಎಫ್.ಜಿ. ಚಿನ್ನನವರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಅಜ್ಜಪ್ಪ ಅಕ್ಕನ್ನವರ ಹನಮಂತ ಪ್ಯಾಟಿಗೌಡರ, ಮಾರುತಿ ಹಡಪದ, ಹಣಮಂತ ಗುಡ್ಲಮನಿ, ಕೃಷ್ಣಾ ಗಿರೆಣ್ಣವರ, ಸಂಜು ಕಮತೆ, ಸಂತೋಷ ಕಲಾಲ, ಶ್ರೀಧರ ಉಡುಪಿ, ರಾಘವೇಂದ್ರ ದಳವಾಯಿ, ಗುರು ಗಂಗಣ್ಣವರ, ಮಲ್ಲು ಬೋಳನ್ನವರ, ಸುಭಾಷ ಗೊಡ್ಯಾಗೊಳ ಇದ್ದರು.


Spread the love

About inmudalgi

Check Also

ಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ

Spread the loveಹಾಡುಗಬ್ದ ಧ್ವನಿ ಸುರುಳಿಯ ಮಹಾರಾಜ ಸಿದ್ದು ಹಳ್ಳೂರ ‘ಸಿದ್ಧರೆಲ್ಲರೂ ಪ್ರಸಿದ್ಧರಾಗಿರುವುದಿಲ್ಲ! ಪ್ರಸಿದ್ಧರೆಲ್ಲರಿಗೂ ಸಿದ್ಧಿ ಇರುವುದಿಲ್ಲ. ಲೋಕವಿಚಿತ್ರ ಪ್ರಪಂಚದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ