ರಾಜ್ಯದಲ್ಲಿ ಇಂದು 1498 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಲ್ಲಿ 800, ಬೆಳಗಾವಿಯಲ್ಲಿ 20, ಜನರಲ್ಲಿ ಸೋಂಕು ದೃಢಪಟ್ಟಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದು, ಗೋಕಾಕ ತಾಲೂಕಿನ ಕೊಣ್ಣುರು ಪಟ್ಟಣದ 55 ವರ್ಷದ ಮಹಿಳೆಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 414 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 7 ಕ್ಕೆ ಏರಿದೆ.
ಅಥಣಿ-10
ಕಾಗವಾಡ-1
ಬೆಳಗಾವಿ-4
ರಾಮದುರ್ಗ-1
ಚಿಕ್ಕೋಡಿ-2
ಗೋಕಾಕ-1
ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 26,815ಕ್ಕೇರಿದೆ. ಇಂದು 15 ಜನರು ಸಾವಿಗೀಡಾಗಿದ್ದಾರೆ.