Breaking News
Home / ಬೆಳಗಾವಿ / ‘ಸಾಧಕರಿಂದ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗಬೇಕು’

‘ಸಾಧಕರಿಂದ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗಬೇಕು’

Spread the love

 

‘ಸಾಧಕರಿಂದ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗಬೇಕು’

ಮೂಡಲಗಿ: ತಾಲ್ಲೂಕಿನ ಫುಲಗಡ್ಡಿ ಶ್ರೀ ಗುರು ಚಕ್ರವರ್ತಿ ಸದಾಶಿವ ಶಿವಯೋಗಿ ಆಶ್ರಮದ ಚಂದ್ರಮ್ಮತಾಯಿ ಹಾಗೂ ಸದಾಶಿವ ಅಜ್ಜನವರ ಜಾತ್ರೆ, ರಥೋತ್ಸವ ನಿಮಿತ್ತವಾಗಿ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಮೂಡಲಗಿಯ ಬಾಲಶೇಖರ ಬಂದಿ ಅವರಿಗೆ ‘ಪತ್ರಿಕಾ ಮಿತ್ರ’, ಮುಧೋಳ ತಾಲ್ಲೂಕಿನ ದಾದನಟ್ಟಿಯ ಕಾಶೀಬಾಯಿ ಭೂತಪ್ಪಗೋಳ ಅವರಿಗೆ ‘ಪಾರಿಜಾತ ಪುತ್ರಿ’ ಪ್ರಶಸ್ತಿ, ಖಾನಟ್ಟಿಯ ಜಾನಪದ ಸಾಹಿತಿ ಡಾ. ಮಹಾದೇವ ಪೋತರಾಜ ಅವರಿಗೆ ‘ಜಾನಪದ ಸಿರಿ” ಪ್ರಶಸ್ತಿ, ಗೋಕಾಕ ತಾಲ್ಲೂಕಿನ ಉದಗಟ್ಟಿಯ ಜಾನಪದ ಕಲಾವಿದ ಡಾ. ಉದ್ದಣ್ಣ ಗೋಡೇರ ಮತ್ತು ಯಾದವಾಡದ ಹಣಮಂತ ಮಾದರ ಅವರಿಗೆ ‘ಜಾನಪದ ಜಾಣ’ ಪ್ರಶಸ್ತಿ, ಸವದತ್ತಿ ತಾಲ್ಲೂಕಿನ ಅಸುಂಡಿಯ ಹಣಮಂತ ಪಾದಗಟ್ಟಿ ಅವರಿ ‘ಸಂಗೀತ ಸಿರಿ’ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿದ್ದ ವಡೇರಹಟ್ಟಿಯ ನಾರಾಯಣ ಶರಣರು ಮಾತನಾಡಿ ‘ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿದೆ ಅವು ನಾಡಿನ ಸಾಂಸ್ಕøತಿಕ ಪರಂಪರೆಯನ್ನು ಬೆಳೆಸುವಂತಾಗಬೇಕು. ಅಂಥ ಶ್ಲಾಘನೀಯ ಕಾರ್ಯವನ್ನು ಫುಲಗಡ್ಡಿಯ ಸದಾಶಿವ ಜಾತ್ರಾ ಸಮಿತಿಯವರು ಮಾಡುತ್ತಿದ್ದಾರೆ ಎಂದರು.
ಸಾಧಕರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು. ಫುಲಗಡ್ಡಿ ಜಾತ್ರೆಯಲ್ಲಿ ನೀಡುತ್ತಿರುವ ಪ್ರಶಸ್ತಿಗೆ ಭಾಜನರಾದವರೆಲ್ಲ ಉತ್ತಮ ಕಾರ್ಯವನ್ನು ಮಾಡಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ಮಾತುಗಳನ್ನು ಹೇಳಿದರು.
ಸಮಾರಂಭದ ಸಂಘಟ ಸಾಹಿತಿ, ಕಲಾವಿದ ಜಯಾನಂದ ಮಾದರ ಮಾತನಾಡಿ ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವರನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಪ್ರದಾಯವನ್ನು ಜಾತ್ರೆಯಲ್ಲಿ ಮಾಡುತ್ತಿದ್ದು, ಊರಿನ ಜನರ ಪ್ರೀತಿ, ವಿಶ್ವಾಸವು ಇದಕ್ಕೆಲ್ಲ ಮುಖ್ಯವಾಗಿದೆ ಎಂದರು.
ಪ್ರಶಸ್ತಿ ಪುರಸ್ಕøತರ ಪರವಾಗಿ ಬಾಲಶೇಖರ ಬಂದಿ, ಡಾ. ಮಹಾದೇವ ಪೋತರಾಜ ಮಾತನಾಡಿದರು.
ಸಾಹಿತಿ ಲಕ್ಷ್ಮಣ ಚೌರಿ, ಆನಂದ ಸೊರಗಾಂವಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಬಬಲೇಶ್ವರ ಶ್ರೀಗಳು, ಹೊನಕುಪ್ಪಿಯ ಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಪ್ರಾರಂಭದಲ್ಲಿ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ತಂಡಗಳಿಂದ ಭಜನೆ, ಜಾನಪದ ಕಲಾ ಪ್ರದರ್ಶನವು ಜರುಗಿತು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ