ಮೂಡಲಗಿ: ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿ ಅರಭಾಂವಿ ಮಂಡಲ ವತಿಯಿಂದ ಪ್ರತಿಭಟಿಸಿ ಘಟನೆಯಲ್ಲಿ ಹತರಾದವರಿಗೆ ಮೇಣದಬತ್ತಿ ಹಿಡಿದು ಮೌನ ಪ್ರತಿಭಟನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಾಂಡುರಂಗ ಮಹೇಂದ್ರಕರ. ಕುಮಾರ ಗಿರಡ್ಡಿ, ಬಸವರಾಜ್ ಪಾಟೀಲ್, ಡಾ. ಬಸವರಾಜ ಪಾಲಭಾಂವಿ. ಪರಪ್ಪ ಹಡಪದ, ಮಲ್ಲು ಯಾದವಾಡ ಜಗದೀಶ್ ತೇಲಿ, ಸೋಮಯ್ಯ ಹಿರೇಮಠ್, ಮಲ್ಲಪ್ಪ ಢವಳೇಶ್ವರ, ಶೀತಲ್ ಬೇವಿನಕಟ್ಟಿ, ಚೇತನ್ ಹೊಸಕೋಟಿ ಮಲ್ಲಪ್ಪ ನೇಮಗೌಡರ ಚೇತನ್ ನಿಶಾನಿಮಠ ಇನ್ನೂ ಹಲವು ಹಿಂದೂಪರ ಕಾರ್ಯಕರ್ತರು ಭಾಗವಹಿಸಿದ್ದರು
