ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ್ ಶುಗರ್ಸ್ ಕಾರ್ಖಾನೆಯ ಡಿಸ್ಟಿಲರಿ ಘಟಕದಲ್ಲಿ ನೂತನ ಕಾಂಪ್ರೆಸ್ಡ್ ಬಯೊಗ್ಯಾಸ್ ಘಟಕದ ಉದ್ಘಾಟನಾ ಸಮಾರಂಭ ಬುಧವಾರದಂದು ಜರುಗಿತು.
ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಸತೀಶ ಜಾರಕಿಹೊಳಿ ಅವರು ನೂತನ ಕಾಂಪ್ರೆಸ್ಡ್ ಬಯೊಗ್ಯಾಸ್ ಘಟಕವನ್ನು ಉದ್ಘಾಟಿಸಿ ಮತ್ತು ಕಾಂಪ್ರೆಸ್ಡ್ ಬಯೊಗ್ಯಾಸ್ ತುಂಬಿದ ವಾಹನಗಳನ್ನು ಹಸಿರು ಬಾವುಟದೊಂದಿಗೆ ಚಾಲನೆ ನೀಡಿ ಮಾತನಾಡಿ ಈ ಇಂಧನವನ್ನು ವಾಹನ ಇಂಧನವನ್ನಾಗಿ ಮತ್ತು ಅಡುಗೆ ಅನಿಲವನ್ನಾಗಿ ಬಳಿಸಲಾಗುತ್ತದೆ. ಈ ಘಟಕದ ಯಶಸ್ವಿ ಕಾರ್ಯನಿರ್ವಣೆಗೆ ಶುಭಹಾರೈಸುತ್ತಾ ಎಲ್ಲ ಅಧಿಕಾರಿ ಮತ್ತು ಕಾರ್ಮಿಕರ ಕೆಲಸವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡಿ, ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷರಾದ ಸತೀಶ ಜಾರಕಿಹೊಳಿಯವರನ್ನು ಸ್ಮರಿಸುತ್ತಾ ಕೇವಲ ಐದು ತಿಂಗಳಲ್ಲಿ ಘಟಕವನ್ನು ಸ್ಥಾಪಿಸಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಅಧಿಕಾರಿ ಮತ್ತು ಕಾರ್ಮಿಕ ವರ್ಗದವರ ಕೆಲಸವನ್ನು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ಪಿ.ಡಿ.ಹಿರೇಮಠ, ವೀರು ತಳವಾರ, ದಿಲೀಪ ಪವಾರ, ಪ್ರಧಾನ ವ್ಯವಸ್ಥಾಪಕ ಮಹೇಶ ಜಿ.ಆರ್, ಮಲ್ಲಿಕಾರ್ಜುನ ಸಸಾಲಟ್ಟಿ ಹಾಗೂ ಎಲ್ಲ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.