Breaking News
Home / ಬೆಳಗಾವಿ / ಪಾಂಡುರಂಗ ಮತ್ತು ಮಹರ್ಷಿ ವಾಲ್ಮೀಕಿ ದೇವಸ್ಥಾನಗಳ ಕಳಸಾರೋಹನ ಹಾಗೂ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ

ಪಾಂಡುರಂಗ ಮತ್ತು ಮಹರ್ಷಿ ವಾಲ್ಮೀಕಿ ದೇವಸ್ಥಾನಗಳ ಕಳಸಾರೋಹನ ಹಾಗೂ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ

Spread the love

ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ಮತ್ತು ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನಗಳ ಕಳಸಾರೋಹನ, ಜಾತ್ರಾ ಮಹೋತ್ಸವ, ಶ್ರೀ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನೆ ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭ ಬುಧವಾರ ಮೇ.14 ರಂದು ಮುಂಜಾನೆ 10=30ಕ್ಕೆ ಜರುಗಲಿದೆ ಎಂದು ಜಾತ್ರಾ ಕಮಿಟಿ ಅವರು ತಿಳಿಸಿದ್ದಾರೆ.

ಸಮಾರಂಭದ ಸಾನ್ನಿಧ್ಯವನ್ನು ಮುಕ್ತಿಮಠದ ಶ್ರೀ ಶಿವಶಿದ್ಧಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಪಂಡರಪೂರದ ಶ್ರೀ ಹ ಬ ಗೋಪಾಲ ತುಕಾರಾಮ ವಾಸ್ಕರ್, ಬಬಲಾದಿಯ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಜಿ, ಅರಭಾವಿಯ ಶ್ರೀ ಗುರುಬಸವಲಿಂಗ ಮಹಾಸ್ವಾಮಿಜಿಗಳು ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಲ ಜಾರಕಿಹೊಳಿಯವರು ಕಾರ್ಯಕ್ರಮ ಉದ್ಘಾಟಿಸುವರು, ವಾಲ್ಮೀಕಿ ಸಮುದಾಯ ಭವನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಸಂತೋಷ ಜಾರಕಿಹೊಳಿ, ಸನ್ನತ್ ಜಾರಕಿಹೊಳಿ, ರಾಹುಲ ಜಾರಕಿಹೊಳಿ, ಮುರುಳಿ ವಜ್ರಮಟಿ, ವಡೆರಹಟ್ಟಿಯ ಗ್ರಾ.ಪಂಅಧ್ಯಕ್ಷೆ ಅಕ್ಕವ್ವ ಮಳಿವಡೆರ, ಸಿಪಿಐ ಶ್ರೀಶೈಲ್ ಬ್ಯಾಕೋಡ, ಪಿಎಸ್‍ಐ ಗಳಾದ ರಾಜು ಪೂಜಾರಿ, ಬಿ ಆನಂದ್, ಪಿಡಿಒ ಶಿವಾನಂದ್ ಗುಡಸಿ, ಉಪತಹಶೀಲ್ದಾರ ಪರಶುರಾಮ ನಾಯಕ, ರಮೇಶ ಕುಲಕರ್ಣಿ, ಶಿವನಗೌಡ ನಾಯಕ, ಅಶೋಕ ನಾಯಕ, ಮುತ್ಯಪ್ಪ ಕುಳ್ಳುರ, ಪಾಂಡು ಮಣ್ಣಿಕೆರಿ, ಚಂದ್ರು ಮೊಟೆಪಗೊಳ, ಪಾಂಡು ದೊಡಮನಿ, ಸೈದಪ್ಪ ಗದಾಡಿ, ಜಯಾನಂದ ಮಾದರ, ಗೋಪಾಲ ಕುದರಿ, ಸಿದ್ದಲಿಂಗ ಪಾಟೀಲ, ಮಹದೇವ ಗೋಡೆರ ಮತ್ತಿತರರು ಭಾಗವಹಿಸಿದ್ದಾರೆ.


Spread the love

About inmudalgi

Check Also

11 ಕಾರ್ಯಕರ್ತೆಯರು, 34 ಸಹಾಯಕಿಯರಿಗೆ ಆದೇಶ ಪತ್ರಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love  ಗೋಕಾಕ- ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಮಕ್ಕಳ ಮತ್ತು ತಾಯಂದಿರರ ಪ್ರೀತಿಗೆ ಪಾತ್ರರಾಗುವಂತೆ ಅರಭಾವಿ ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ