ಗೋಕಾಕ – ಕೊರೋನಾ ಮಹಾಮಾರಿಯ ಸಂಕಟ ಗೋಕಾಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗೋಕಾಕ್ ತಹಶೀಲ್ದಾರ್ ಫುಲ್ ಅಲರ್ಟ ಆಗಿದ್ದಾರೆ.ಇಂದಿನಿಂದ ಗೋಕಾಕಿನಲ್ಲಿ ಹಾಪ್ ಲಾಕ್ ಡೌನ್ ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ.
ಗೋಕಾಕ್ ತಹಶಿಲ್ದಾರ್ ಕಚೇರಿ ಸಿಬ್ಬಂದಿಗೆ ಕೊರೊನಾ ಹಿನ್ನೆಲೆ.ಬೆಳಗಾವಿ ಜಿಲ್ಲೆ ಗೋಕಾಕ್ ತಹಶಿಲ್ದಾರ್ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ನಿನ್ನೆ 36 ವರ್ಷದ ಗ್ರಾಮ ಲೆಕ್ಕಾಧಿಕಾರಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಗೋಕಾಕ್ ತಹಶಿಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಗೋಕಾಕ್ ತಾಲೂಕಿನಲ್ಲಿ ದಿನೇದಿನೇ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ನಗರದಲ್ಲಿ ಸೀಮಿತ ಅವಧಿಯ ವಹಿವಾಟುಗೆ ಆದೇಶ ಮಾಡಲಾಗಿದೆ. ಬೆಳಗ್ಗೆ ಐದು ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವ್ಯಾಪಾರ ವಹಿವಾಟು.
ಮಧ್ಯಾಹ್ನ 1 ಗಂಟೆಯಿಂದ ಬೆಳಗ್ಗೆ 5ರವರೆಗೆ ಷರತ್ತು ಬದ್ಧ ಲಾಕ್‌ಡೌನ್ ಜಾರಿ ಮಾಡುವಂತೆ ಗೋಕಾಕ್ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಇಂದಿನಿಂದ ಜುಲೈ 13ರವರೆಗೆ ಸೀಮಿತ ಅವಧಿ ವಹಿವಾಟು ನಡೆಸಲು ತಹಶಿಲ್ದಾರ ಆದೇಶ ಹೊರಡಿಸಿರುವದರಿಂದ ಗೋಕಾಕಿನಲ್ಲಿ ಹಾಪ್ ಡೇ ಲಾಕ್ ಡೌನ್ ಜಾರಿಯಲ್ಲಿದೆ.
IN MUDALGI Latest Kannada News