Breaking News
Home / ಬೆಳಗಾವಿ / *ಮಾನವನ ಮನುಕುಲದ ಉಳುವಿಗಾಗಿ ಗಿಡ ಮರಗಳನ್ನು ಬೆಳಿಸೋಣ : ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ*

*ಮಾನವನ ಮನುಕುಲದ ಉಳುವಿಗಾಗಿ ಗಿಡ ಮರಗಳನ್ನು ಬೆಳಿಸೋಣ : ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ*

Spread the love

ಹಳ್ಳೂರ : ಪ್ರಕೃತಿಯನ್ನು ಉಳಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ, ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಅಧ್ಯಕ್ಷರು ಹಾಗೂ ಸಾಲು ಮರದ ಸಿದ್ದಣ್ಣ ಖ್ಯಾತಿಯ ಪರಿಸರ ಪ್ರೇಮಿ ಸಿದ್ದಣ್ಣ ದುರದುಂಡಿ ಹೇಳಿದರು.

ಅವರು ಹಳ್ಳೂರ ಗ್ರಾಮದ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯ ದಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡವನ್ನು ನೆಟ್ಟು ನೀರು ಉಣಿಸಿ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡುತ್ತಾ ಜೂನ್ ತಿಂಗಳ ಪೂರ್ತಿ ಗಿಡಗಳನ್ನು ನೆಟ್ಟು ವರ್ಷವಿಡಿ ರಕ್ಷಣೆ ಮಾಡಿ, ಮಾನವನ ಮನುಕುಲದ ಉಳುವಿಗಾಗಿ ಸಸಿಗಳನ್ನು ನೆಟ್ಟು ಅವುಗನ್ನು ನಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಸುಂದರ ಪರಿಸರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಹಿರಿಯ ಉಪನ್ಯಾಸಕರಾದ ಸುಭಾಷ್ ಪತ್ತಾರ ವಹಿಸಿ ಮಾತನಾಡುತ್ತಾ ಮನೆಗೊಂದು ಮರ ಉರಿಗೊಂದು ವನ ಎನ್ನುವಂತೆ ಪ್ರತಿಯೊಬ್ಬರೂ ಗಿಡಗನ್ನು ಬೆಳಸಬೇಕು. ಆ ನಿಟ್ಟಿನಲ್ಲಿ ಹಳ್ಳೂರಿನ ಯುವ ಸಂಘಟಕ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಅವರು ಮಾಡುವ ನಿರಂತರ ಸಂಘಟನೆ ಮತ್ತು ನಿಸ್ವಾರ್ಥ ಸೇವೆ ಮಾಡುವದು ನಿಜವಾಗಲು ಶ್ಲಾಘನಿಯವಾಗಿದೆ ಎಂದು ಹೇಳಿದರು.

ಕಾಲೇಜಿನ ಉಪನ್ಯಾಸಕರಾದ ಎಮ್ ಎಸ್ ಕುಂಬಾರ ಪ್ರಾಸ್ತಾವಿಕವಾಗಿ ಮಾತಾಡಿದರು. ಉಪನ್ಯಾಸಕರಾದ ಶಾಂತಿನಾಥ ಡಿಗ್ರಜ್, ಜ್ಯೋತಿ ಭದ್ರಶೇಟ್ಟಿ, ರೂಪಾ ಅಂಗಡಿ, ಮತ್ತು ಶಿವು ಹುಬ್ಬಳ್ಳಿ, ಮುತ್ತು ಕಲ್ಲೋಳಿ, ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ವಸಂತ ಬೆಕ್ಕೇರಿ ನಿರೂಪಿಸಿ ಸ್ವಾಗತಿದ್ದರು. ಶಾಂತಿನಾಥ ಡಿಗ್ರಜ್ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ