ಮೂಡಲಗಿ: ರಾಜ್ಯದಲ್ಲಿ ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದು ಕೇಂದ್ರ ಸರ್ಕಾರದಿಂದ ಪೂರೈಸಲ್ಪಡುವ ರಸಗೊಬ್ಬರಗಳು ವಿತರಣಾ ಕೇಂದ್ರಗಳಿಗೆ ತಲುಪಲು ವಿಳಂಬವಾಗುತ್ತಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ತೊಂದರೆಯಾಗಿದೆ ಮತ್ತು ಪದೆ ಪದೇ ಬೆಲೆ ಏರಿಕೆ ಆಗುತ್ತಿರುವುದು ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ ಅದಕ್ಕೆಲ್ಲ ತಕ್ಷಣವೇ ಪರಿಹಾರವನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ ತಾಲೂಕಾ ಪ್ರಧಾನ ಸಂಚಾಲಕ ರಮೇಶ ನಾಯಕ ನೇತೃತ್ವದಲ್ಲಿ ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ ಅವರಿಗೆ ಮನವಿ ಸಲ್ಲಿಸಲಾಯಿತು
ವೆಂಕಟಾಪೂರ ಗ್ರಾಮದಕ್ಕೆ ರಾಜ್ಯಸಭೆ ಸದಸ್ಯರಾದ ಈರಣ್ಣ ಕಡಾಡಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಮೇಶ ನಾಯ್ಕ ಮತ್ತು ವೆಂಕಟಾಪೂರ ಗ್ರಾಮದ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿ ಕೇಂದ್ರ ಸರ್ಕಾರ ರಸಗೊಬ್ಬರಗಳ ವಿತರಣೆಯಲ್ಲಿ ಅನುಸರಿಸುತ್ತಿರುವ ವಿಳಂಬ ಮತ್ತು ಬೆಲೆ ಏರಿಕೆ ನೀತಿಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದರು ಎಲ್ಲೆಡೆ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದು ಇಂತಹ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಮತ್ತು ಬೆಲೆಗೆ ರಸಗೊಬ್ಬರಗಳು ಪೂರೈಕೆಯಾಗದ್ದಿದರೆ ರೈತರಿಗೆ ಸಾಕಷ್ಟು ಹಾನಿಯಾಗಲಿದು ಸಂಸದರಾದ ತಾವು ಕೇಂದ್ರ ಸರ್ಕಾರಕ್ಕೆ ರಾಜ್ಯದ ರೈತರ ಸಮಸ್ಯೆಗಳನ್ನು ಗಮನಕ್ಕೆ ತಂದು ರಾಜ್ಯದ ಜಿಲ್ಲೆಯ ರೈತರಿಗೆ ನ್ಯಾಯ ಒದಗಿಸಲು ಮನವಿ ಮಾಡಿದರು
ಮನವಿ ಸ್ವೀಕರಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಈಗಲೇ ನಾವು ಈ ವಿಚಾರವಾಗಿ ಚರ್ಚೆ ಮಾಡಿದು ಶೀಘ್ರವೇ ಕೇಂದ್ರದ ಗಮನಕ್ಕೆ ತಂದು ರಾಜ್ಯದ ರೈತರಿಗೆ ಸಮರ್ಪಕ ರೀತಿಯಲ್ಲಿ ನ್ಯಾಯ ಒದಗಿಸುತ್ತೆವೆ ಎಂದು ಭರವಸೆ ನೀಡಿದರ
ಈ ಸಂದರ್ಭದಲ್ಲಿ ಸಿದ್ದು ಅಜ್ಜನಕಟ್ಟಿ ,ಮಾನಿಂಗ ಕವಟಕೊಪ್ಪ, ಗೀರಿಶ ಹಳ್ಳೂರ ,ವೆಂಕಪ್ಪಾ ಕೋಳಿಗುಡ್ಡ ,ಸಂಗಪ್ಪಾ ಕಟ್ಟಿಕಾರ, ಶಾಸಪ್ಪಗೌಡ ಪಾಟೀಲ, ಭೀಮಶಪ್ಪಾ ಕವಟಕೊಪ್ಪ ಉಪಸ್ಥಿತರಿದ್ದರು