ಮೂಡಲಗಿ: ಸಮೀಪದ ಮುಧೋಳ ನಿಪ್ಪಾಣಿ ರಾಜ್ಯ ಹೆದ್ದಾರಿಯ ಗುರ್ಲಾಪೂರ ಹೊರ ವಲಯದ ಮಾಳತೋಟ ಶಾಲೆ ಹತ್ತಿರ ಬೈಕ್ ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಭಾನುವಾರ ಸಾಯಂಕಾಲ 7.30 ಕ್ಕೆ ಸಂಭವಿಸಿದೆ.
ಮೂಡಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಬೈಕ್ ಸವಾರರಾದ ಮೂಡಲಗಿಯ ಶ್ರೀಶೈಲ ಯುಹಾನ ಹಾದಿಮನಿ, ರಂಗಾಪೂರ ಗ್ರಾಮದ ಸುರೇಶ ಸತ್ಯಪ್ಪ ಮಾರಾಪೂರ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು ಒಬ್ಬ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೊಬ್ಬ ಆಸ್ಪತ್ರೆಗೆ ಸಾಗಿಸಿದ ನಂತರ ಮೃತಪಟ್ಟಿರುವುದಾಗಿ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.