Breaking News
Home / ಬೆಳಗಾವಿ / ‘ಸಾವಯವ ಕೃಷಿಯಿಂದ ಪರಿಸರ ಮತ್ತು ಸಮಾಜಕ್ಕೆ ಉತ್ತಮ’- ಸೋಮೈಯಾ ಸಕ್ಕರೆ ಕಾರ್ಖಾನೆ ಮಾಲೀಕ ಸಮೀರ ಸೋಮೈಯಾ

‘ಸಾವಯವ ಕೃಷಿಯಿಂದ ಪರಿಸರ ಮತ್ತು ಸಮಾಜಕ್ಕೆ ಉತ್ತಮ’- ಸೋಮೈಯಾ ಸಕ್ಕರೆ ಕಾರ್ಖಾನೆ ಮಾಲೀಕ ಸಮೀರ ಸೋಮೈಯಾ

Spread the love

ಮೂಡಲಗಿ: ‘ರೈತರು ಸಾವಯವ ಪದ್ದತಿಯಲ್ಲಿ ಕಬ್ಬು ಬೆಳೆಯುವುದರಿಂದ ಪರಿಸರ ಮತ್ತು ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗುತ್ತದೆ’ ಎಂದು ಸಮೀರವಾಡಿ ಸಕ್ಕರೆ ಕಾರ್ಖಾನೆಯ ಮಾಲೀಕರಾದ (ಸಿಎಂಡಿ) ಸಮೀರ ಸೋಮೈಯಾ ಹೇಳಿದರು.

ಶುಕ್ರವಾರ ತಾಲ್ಲೂಕಿನ ಮೂಡಲಗಿಯ ಪ್ರಗತಿಪರ ರೈತರಾದ ಬಾಳಪ್ಪ ಬಿ. ಬೆಳಕೂಡ ಅವರ ತೋಟಕ್ಕೆ ಭೇಟ್ಟಿ ನೀಡಿ ಕಬ್ಬಿನ ಬೆಳೆಯಲ್ಲಿ ಮಾಡಿರುವ ಸಾಧನೆಯನ್ನು ನೋಡಿ ಮಾತನಾಡಿದ ಅವರು ಕೃಷಿಯು ಪರಿಸರಕ್ಕೆ ಹಾನಿಯಾಗದಂತೆ ರೈತರು ಕಾಳಜಿವಹಿಸುವುದು ಇಂದಿನ ಅವಶ್ಯಕತೆ ಇದೆ ಎಂದರು.
ಕಲ್ಲೋಳಿಯ ರೈತ ಬಾಳಪ್ಪ ಬಿ. ಬೆಳಕೂಡ ಅವರು ಕಬ್ಬು ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಮಾಡತ್ತಿರುವುದು ಶ್ಲಾಘನೀಯವಾಗಿದೆ. ಈ ಹಿಂದೆ ಎಕರೆಗೆ 125 ಟನ್ ಇಳುವರಿ ಪಡೆದು ದಾಖಲೆ ಮಾಡಿದ್ದರು. ಈ ಬಾರಿ ಎಕರೆಗೆ 140 ಟನ್ ಇಳುವರಿ ತೆಗೆಯುವ ಅವರ ಗುರಿ ಮತ್ತು ಅವರ ಶ್ರಮವು ನಿಜವಗಿಯೂ ಮೆಚ್ಚುವಂತದ್ದು ಎಂದರು.
ರೈತÀ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಎರೆಹುಳ ಗೊಬ್ಬರ ತೊಟ್ಟಿಗಳು, ಬಯೋಡೈಜಿಸ್ಟ್ ಘಟಕ, ದೇಸಿ ಆಕಳು, ಎಮ್ಮೆಗಳ ಕೊಟ್ಟಿಗೆ, ಜೀವಾಮೃತ ತಯಾರಿಕೆ ಘಟಕ ಇವುಳನ್ನು ಸಮೀರ ಸೋಮೈಯಾ ಅವರು ವೀಕ್ಷಿಸಿದರು.
ಬೆಳಕೂಡ ಅವರು ನೈಸರ್ಗಿಕ ಸಂಗತಿಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುತ್ತಿರುವ ಕೃಷಿ ಪದ್ದತಿಯು ಮಾದರಿಯಾಗಿದೆ. ರೈತರು ಇಂಥ ಪದ್ದತಿಯನ್ನು ಅನುಸರಿಸಿ ಕೃಷಿಯಲ್ಲಿ ಮುಂದೆ ಬರಬೇಕು ಎಂದರು.
ಮಾಧವ ಸಮೀರ ಸೋಮೈಯಾ, ಡಾ. ಲ್ಯಾರಿ ವಾಕರ್, ಡಾ. ಲೀಸಾ, ಸಮೀರವಾಡಿ ಗೋದಾವರಿ ಬೈಯೋರಿಫೈನರಿ ಸಕ್ಕರೆ ಕಾರ್ಯನಿರ್ವಾಹಕ ನಿರ್ದೇಶಕಿ ಸಂಗೀತಾ ಶ್ರೀವಾತ್ಸವ ಕಾರ್ಯನಿರ್ವಾಹಕ ನಿರ್ದೇಶಕ ಬಾಲಚಂದ್ರ ಭಕ್ಷಿ, ಕೆಐಎಎಆರ್ ವಿಭಾಗದ ನಿರ್ದೇಶಕ ಡಾ. ನಂದಕುಮಾರ, ಕಬ್ಬು ವಿಭಾಗದ ಮಹಾಪ್ರಬಂಧಕ ವಿ.ಎಸ್. ಕಣಬೂರ, ವಿಶ್ವನಾಥ ಭುಜನ್ನವರ, ಸಂದೀಪನ, ಅಶೋಕ ಕುಡಚಿ, ರವಿ ಖಾನಗೌಡ್ರ, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಅಶೋಕ ಗದಾಡಿ, ಶಂಕರ ಬೆಳಕೂಡ, ಬಸವರಾಜ ಬೆಳಕೂಡ, ಪ್ರಭು ಕಡಾಡಿ, ಚಿದಾನಂದ ಕುಂದನವರ, ರಾಜು ಕಡಾಲಗಿ, ಭೀಮಶಿ ಹೆಬ್ಬಾಳ, ಮಲ್ಲಪ್ಪ ಕುರಬೇಟ, ಉಮೇಶ ಪಾಟೀಲ, ಈರಣ್ಣ ಬೆಳಕೂಡ ಮತ್ತು ರೈತರು ಇದ್ದರು.
ಮುಗಿಯಿತು………….


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ