Breaking News
Home / ತಾಲ್ಲೂಕು / ತಹಶೀಲ್ದಾರ ಬಿ.ಕೆ ಚಂದ್ರಮೌಳೇಶ್ವರ ಅವರ ಹತ್ಯೆ ಖಂಡಿಸಿ ತಾಲೂಕಾ ಸರಕಾರಿ ನೌಕರರ ಸಂಘದಿಂದ ಸರಕಾರಕ್ಕೆ ಮನವಿ ಸಲ್ಲಿಸಿದರು.

ತಹಶೀಲ್ದಾರ ಬಿ.ಕೆ ಚಂದ್ರಮೌಳೇಶ್ವರ ಅವರ ಹತ್ಯೆ ಖಂಡಿಸಿ ತಾಲೂಕಾ ಸರಕಾರಿ ನೌಕರರ ಸಂಘದಿಂದ ಸರಕಾರಕ್ಕೆ ಮನವಿ ಸಲ್ಲಿಸಿದರು.

Spread the love

ಮೂಡಲಗಿ: ರಾಜ್ಯದಲ್ಲಿ ಕೊಲಾರ ಜಿಲ್ಲೆಯ ಬಂಗಾರುಪೇಟೆ ತಹಶೀಲ್ದಾರ ಬಿ.ಕೆ ಚಂದ್ರಮೌಳೇಶ್ವರ ಅವರ ಹತ್ಯೆ ಖಂಡನಿಯವಾಗಿದೆ. ಸರಕಾರಿ ನೌಕರರು ಭಯಮುಕ್ತವಾಗಿ ಸರಕಾರದ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಇಂತಹ ಅಮಾನವಿಯ ಕೃತ್ಯಗಳು ನಡೆದಾಗ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಕಷ್ಟ ಸಾಧ್ಯವಾಗಿದೆ. ಕೂಡಲೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ನೌಕರರ ಹಿತವನ್ನು ಕಾಪಾಡಿಕೊಳ್ಳ ಬೇಕು ಎಂದು ಆಗ್ರಹಿಸಿ ತಾಲೂಕಾ ಸರಕಾರಿ ನೌಕರರ ಸಂಘ ತಹಶೀಲ್ದಾರ ಡಿ.ಜೆ ಮಹಾಂತ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಗುರುವಾರ ಕೋಲಾರ ಜಿಲ್ಲೆಯ ಬಂಗಾರುಪೇಟೆಯ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ ಗ್ರಾಮದಲ್ಲಿ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವವರ ಜಮೀನು ವ್ಯಾಜ್ಯ ಸಂಬಂಧಿಸಿದಂತೆ ಪೊಲಿಸ್ ರಕ್ಷಣೆಯಲ್ಲಿ ಜಂಟಿ ಸರ್ವೆ ಕಾರ್ಯ ಸಂದರ್ಭದಲ್ಲಿ ವೆಂಕಟಪತಿ ಎಂಬುವವರು ತಹಶೀಲ್ದಾರರಿಗೆ ಚಾಕುವಿನಿಂದ ಹತ್ಯೆಗೈದಿರುವದು ಖಂಡನೀಯವಾಗಿದೆ. ರಾಜ್ಯದ್ಯಂತ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭಗಳಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿವೆ. ಪ್ರಮುಖವಾಗಿ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಆರೋಗ್ಯ ಇಲಾಖೆಗಲು ಸೇರಿದಂತೆ ಹಲವು ಇಲಾಖೆಯ ನೌಕರರು ಪ್ರಾಣ ಭಯದ ಜೊತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೋಳ್ಳುವದು ಅತ್ಯಾವಶಕವಾಗಿದೆ ಎಂದು ತಿಳಿಸಿದ್ದಾರೆ.
ಮೃತ ತಹಶೀಲ್ದಾರ ಬಿ.ಕೆ ಚಂದ್ರಮೌಳೇಶ್ವರರವರ ಹತ್ಯೆಗೆ ಕಾರಣೀಕರ್ತರಿಗೆ ಕಠಿಣ ಶಿಕ್ಷೆಯಾಗಬೇಕು. ರಾಜ್ಯದ ನೌಕರರು ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಿಸುವಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಬೇಕು. ಮೃತರ ಕುಟುಂಭಕ್ಕೆ ಅನುಕಂಪದ ಆಧಾರದಲ್ಲಿ ಸರಕರಿ ನೌಕರಿ ಕೊಡಬೇಕು ಹಾಗೂ ಅಗತ್ಯ ಸರಕಾರಿ ಆರ್ಥಿಕ ಸೌಲಭ್ಯಗಳು ಹಾಗೂ ಅಗತ್ಯ ಅನೂಕುಲಗಳನ್ನು ಕೂಡಲೆ ರಾಜ್ಯ ಸರಕಾರ ಮಾಡಬೇಕು. ಸರಕಾರಿ ನೌಕರರ ಸಂಘವು ಅಗತ್ಯ ಸಹಾಯ ದೊರೆಯದಿದ್ದರೆ ರಾಜ್ಯಾದ್ಯಂತ ಉಗ್ರ ಸ್ವರೋಪದ ಪ್ರತಿಭಟನೆ ಮಾಡುವದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ತಹಶೀಲ್ದಾರ ಕಛೇರಿಯ ಸಿಬ್ಬಂದಿ ಹಾಗೂ ನೌಕರರ ಬಳಗದವತಿಂದ ಮೃತರಿಗೆ ಮೌನಾಚರಣೆ ಸಲ್ಲಿಸುವ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಶಿವಾನಂದ ಬಬಲಿ, ತಾಲೂಕಾ ಸರಕಾರಿ ನೌಕರ ಸಂಘದ ಅಧ್ಯಕ್ಷ ಆನಂದ ಹಂಜ್ಯಾಗೋಳ, ಪ್ರಧಾನ ಕಾರ್ಯದರ್ಶಿ ಕೆ.ಆರ್ ಅಜ್ಜಪ್ಪನವರ, ಖಜಾಂಚಿ ಎ.ಎಮ್ ಮೋಡಿ, ಪದಾಧಿಕಾರಿಗಳಾದ ಆರ್.ಎಮ್ ಮಹಾಲಿಂಗಪೂರ, ರಾಮಚಂದ್ರ ಸಣ್ಣಕ್ಕಿ, ಎಸ್ ಐ ಸವದತ್ತಿ, ರಾಮಚಂದ್ರ ಸೋನವಾಲಕರ, ಶಿವಲಿಂಗಪ್ಪ ಬಿ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ರಾಮ ಲೋಕನ್ನವರ, ತಾಲೂಕಾಧ್ಯಕ್ಷ ಬಿ.ಆರ್ ತರಕಾರ, ಪದಾಧಿಕಾರಿಗಳಾದ ಎಡ್ವಿನ್ ಪರಸಣ್ಣವರ, ಶಂಕರ ಗುಡಗುಡಿ, ಎಸ್.ಎಲ್ ಪಾಟೀಲ, ಕೆ.ಎಲ್ ಮೀಶಿ, ಎಲ್.ಎಲ್ ವ್ಯಾಪಾರಿ, ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ