
ಮೂಡಲಗಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಎಜ್ಯುಕೇಶನ್ ಮತ್ತು ಸೋಶಿಯಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಪಾರವಾದ ಸೇವೆ ಸಲ್ಲಿಸಿ ಬಾಗಲಕೋಟೆ ಜಿಲ್ಲೆಗೆ ಡಿಡಿಪಿಐ ಆಗಿ ಬಡ್ತಿ ಹೊಂದಿ ವರ್ಗಾವಣೆ ಆಗಿರುವ ಅಜೀತ ಮನ್ನಿಕೇರಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕಮಿಟಿ ಅಧ್ಯಕ್ಷ ಮಲೀಕ ಹುಣಶಾಳ ಅವರು ಮಾತನಾಡಿ, ಈ ಭಾಗದ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕ್ರೀಡೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹದ ಪ್ರತೀಕವಾಗಿ ಶಿಕ್ಷಣ ವಲಯವು ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಕ್ರೀಡೆಯಲ್ಲಿ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಸಾಧನೆಗೈಯುವಂತಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೊಂಡಾಡಿದರು.
ಡಿಡಿಪಿಐ ಅಜೀತ ಮನ್ನಿಕೇರಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಇಲ್ಲಿಯವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಮಯದಲ್ಲಿ ತಾವುಗಳು ನೀಡಿದ ಸಹಕಾರ, ಪ್ರೋತ್ಸಾಹದೊಂದಿಗೆ ನನ್ನನ್ನು ಸತ್ಕರಿಸಿದ್ದು ಸಂತಸವಾಗಿದ್ದು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಉತ್ತಮ ಶಿಕ್ಷಣ ಕಲ್ಪಿಸಿಕೊಟ್ಟು ಒಳ್ಳೆಯ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿಯನ್ನು ವಹಿಸಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲ್ ಲಾಡಖಾನ, ಅನ್ವರ್ ನದಾಫ್, ಮಲೀಕ ಪಶ್ಛಾಪೂರ,ಲಾಲಸಾಬ ಸಿದ್ದಾಪುರ, ಅಕ್ಬರ್ ಪಾಶ್ಛಾಪೂರ, ಶಕೀಲ್ ಬೇಪಾರಿ, ಮಲೀಕ ಮೊಗಲ್, ಹುಸೇನಸಾಬ ಶೇಖ್, ನನ್ನುಸಾಬ ಶೇಖ್, ಸಾಕೀಬ ಪೀರಜಾದೆ, ಗಫಾರ್ ಡಾಂಗೆ, ಇಸ್ಮಾಯಿಲ್ ಇನಾಮದಾರ, ಮಗತುಮ್ ಬೇಪಾರಿ, ಲಾಲಸಾಬ ಸೈಯ್ಯದ್, ಸಾಹೇಬ್ ಗದ್ಯಾಳ, ಶಾಬೂದ್ದೀನ ಹುಣಶಾಳ ಹಾಗೂ ಅರಭಾವಿ ಮುಸ್ಲಿಂ ಮುಖಂಡರಾದ ಇಕ್ಬಾಲ್ ಸರಕಾವುಸ್,ಶಾಹನವಾಜ ದಬಾಡಿ, ರಿಯಾಜ್ ಯಾದವಾಡ, ದಸ್ತಗೀರ ಶಿರಹಟ್ಟಿ ಸೇರಿದಂತೆ ಅನೇಕರು ಇದ್ದರು.
IN MUDALGI Latest Kannada News