ಮೂಡಲಗಿ: ‘ರಕ್ಷಾ ಬಂಧನವು ಸೋದರತೆ, ಸೌಹಾರ್ದತೆಯನ್ನು ಬಲಪಡಿಸುವುದು, ಸಂಬಂಧಗಳನ್ನು ಗಟ್ಟಿಗೊಳಿಸುವುದು‘ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಲಕ್ಷ್ಮೀ ನಗರದ ವಿಸ್ತೀರ್ಣ ಭಾಗದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಕೇಂದ್ರದಲ್ಲಿ ಶನಿವಾರ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತೀಯ ಹಬ್ಬ, ಹರಿದಿನಗಳಲ್ಲಿ ಸಂಸ್ಕೃತಿ, ಆಚರಣೆಗಳು ಇದ್ದು, ಇವು ಮಾನವ ಬದುಕಿಗೆ ಶ್ರೇಷ್ಠವಾಗಿವೆ. ಪರಮಾತ್ನನನ್ನು ನಿತ್ಯ ಧ್ಯಾನಿಸುವ ಮೂಲಕ ಜೀವನದಲ್ಲಿ ಶಾಂತಿ, ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದರು.
ಭಾಗವಹಿಸಿದ್ದ ಎಲ್ಲ ಸಹೋದರ ಮತ್ತು ಸಹೋದರಿಯರಿಗೆ ರಕ್ಷಾ ಬಂಧನ ಮಾಡಿ ಸಿಹಿ ವಿತಿರಿಸಿದರು.
ಇದೇ ಸಂದರ್ಭದಲ್ಲಿ ಭಕ್ತ ಬಸವರಾಜ ಎಂ. ಮಂಗಿ ಅವರು ಮೂಡಲಗಿ ಕೇಂದ್ರದ ಕಟ್ಟಡಕ್ಕೆ ₹5 ಸಾವಿರ ದೇಣಿಗೆಯನ್ನು ನೀಡಿದರು.
ಸವಿತಾ ಅಕ್ಕನವರು, ಚನಬಸು ಗಾಡವಿ, ಬಾಲಶೇಖರ ಬಂದಿ, ಈರಪ್ಪ ಹಂದಿಗುಂದ, ಗೋಪಾಲ ಗಂಗರಡ್ಡಿ, ಶಿವಬಸು ಗೊರವ, ಮಲ್ಲಿಕಾರ್ಜುನ ಎಮ್ಮಿಶೆಟ್ಟರ, ಸದಾಶಿವ ಹಂದಿಗುಂದ, ಬಿ.ಎಂ. ಮಂಗಿ ಮತ್ತಿತರರು.