ಮೂಡಲಗಿ: ಮೇಲೇಷಿಯಾದಲ್ಲಿ ಜರುಗಿದ ಏಷಿಯಿನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನ್‍ಷಿಪ್‍ದಲ್ಲಿ ಕಂಚಿನ ಪದಕ ಪಡೆದುಕೊಂಡಿರುವ ಮೂಡಲಗಿಯ ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಅವರನ್ನು ಮೂಡಲಗಿಯ ಬಣಜಿಗ ಸಮಾಜದ ಮಹಿಳಾ ಘಟಕದಿಂದ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ಲಕ್ಷ್ಮೀ ರಡರಟ್ಟಿ ಮಾತನಾಡಿ ‘ನಮ್ಮಲ್ಲಿಯ ಕೊರತೆಯನ್ನು ಋಣಾತ್ಮಕವಾಗಿ ಪರಿಗಣಿಸಿದೆ ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಪ್ರಯತ್ನ ಮಾಡಿದರೆ ಯಶಸ್ಸು ದೊರೆಯುತ್ತದೆ’ ಎಂದಳು.
ಬಲಗೈ ಇಲ್ಲದೆ ನಾನು ಜನನವಾಗಿರುವೆ. ನನಗೆ ಕೈ ಇಲ್ಲದರ ಕೊರತೆಯನ್ನು ಧನಾತ್ಮಕವಾಗಿ ತೆಗೆದುಕೊಂಡು ಟೇಕ್ವಾಂಡೋ ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿದೆ. ಹೀಗಾಗಿ ನನಗೆ ಕೈ ಇಲ್ಲ ಎನ್ನುವ ನೋವು ಇಲ್ಲವಾಗಿದೆ ಎಂದರು.
ನನ್ನ ಸಾಧನೆಗೆ ಅನೇಕರು ಸಹಾಯ ಮಾಡಿದ್ದಾರೆ ಪ್ರಮುಖವಾಗಿ ತಂದೆ, ತಾಯಿ ಇಬ್ಬರು ನನ್ನ ಬೆನ್ನಿಗೆ ನಿಂತು ಅಂತರಾಷ್ಟ್ರೀಯ ಸಾಧನೆಗೆ ಮುಖ್ಯ ಕಾರಣವಾಗಿದ್ದಾರೆ ಎಂದರು.
ಶಿಕ್ಷಕಿ ಪ್ರಭಾವತಿ ಈ. ಜಕಾತಿ ಪ್ರಾಸ್ತಾವಿಕ ಮಾತನಾಡಿ ಲಕ್ಷ್ಮೀ ರಡರಟ್ಟಿ ಅಂಗವಿಕಲತೆ ಇದ್ದರೂ ಅಂತರಾಷ್ಟ್ರೀಯ ಸಾಧನೆಯನ್ನು ಮಾಡಿದ್ದು ಭಾರತ ದೇಶಕ್ಕೆ ಕೀರ್ತಿ ತಂದಿರುವುದು ಮೂಡಲಗಿಗೆ ಹೆಮ್ಮೆಯಾಗಿದೆ ಎಂದರು.
ಬಣಜಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕ್ಷೆ ರಾಜಶ್ರೀ ಗಾಡವಿ, ಕಾರ್ಯದರ್ಶಿ ರಜನಿ ಬಂದಿ, ಸರೋಜಿನಿ ಜಕಾತಿ, ಶಾಂತಾ ಮಂಗಸೂಳಿ, ನಿರ್ಮಲಾ ಜಕಾತಿ, ಕಮಲವ್ವ ಅವಟಿ, ಪ್ರೀತಿ ಬೆಲ್ಲದ, ಅಶ್ವಿನಿ ಭುಜನ್ನವರ, ಜ್ಯೋತಿ ಎಮ್ಮಿ, ಮಾಲಾ ಗಾಡವಿ, ಮಾನಂದಾ ಭುಜನ್ನವರ ಮತ್ತಿತರರು ಇದ್ದರು.
