ಮೂಡಲಗಿ: ಭಾರತದ ಧಾರ್ಮಿಕ ಪರಂಪರೆಯಲ್ಲಿ ಶ್ರೀ ರಾಘವೇಂದ್ರತೀರ್ಥರು ಅಜರಾಮರು, ರಾಯರು ತಪೆÇೀಶಕ್ತಿ, ಭಕ್ತಿ, ಶ್ರದ್ಧಾ, ಮತ್ತು ಮಾನವೀಯ ಮೌಲ್ಯಗಳ ಪ್ರತೀಕ. ಆರಾಧನಾ ದಿನವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಶ್ರದ್ಧೆ, ಶಾಂತಿಮತ್ತು ಧರ್ಮದ ಬೆಳಕನ್ನು ಹರಡುವ ಪವಿತ್ರ ದಿನವಾಗಿದೆ ಸದ್ಬಕ್ತರು ರಾಯರ ತತ್ವಾದರ್ಶಗಳನ್ನು ಅನುಸರಿಸಿ ಬೇಕೆಂದು ಪಟ್ಟಣದ ಸಂಸ್ಕø ತ ವಿದ್ವಾನ್ ಪಂಡಿತ್ ರಾಘವೇಂದ್ರ ಆಚಾರ್ಯ ತೆಗ್ಗಿ ಹೇಳಿದರು.
ಸೋಮವಾರದಂದು ಪಟ್ಟಣದ ಲಕ್ಷ್ಮೀನಗರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಜರುಗಿದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದಲ್ಲಿ ಪ್ರಾರ್ಥಣೆ, ಕಾಮಧೇನು ಪೂಜೆ, ರಾಯರಿಗೆ , ಅಭಿಷೇಕ, ಲಂಕಾರ, ಪವಮಾನ ಹೋಮ ಹಾಗೂ ಶ್ರೀ ಸತ್ಯನಾರಾಯಣನ ಪೂಜೆ, ಸ್ತೋತ್ರ ಪಠಣ ನೆರೆವೇರಿಸಿ ಮಾತನಾಡಿ, ರಾಘವೇಂದ್ರ ಸ್ವಾಮಿಗಳು ಪವಾಡ ಪುರುಷ ಹಾಗೂ ಭಕ್ತಿಯ ಪರಾಕಾμÉ್ಠಯ ಪ್ರತಿಬಿಂಬವಾಗಿದರು, ರಾಯರ ಅನುಗ್ರಹವನ್ನು ಪ್ರಾರ್ಥಿಸಿ ಅವರ ಚರಿತೆ ನಮ್ಮ ಜೀವನದಲ್ಲಿ ಧರ್ಮದ ದೀಪವಾಗಲಿ, ಶ್ರದ್ಧೆಯ ದಿಕ್ಕು ತೋರಿಸಲಿ, ಮತ್ತು ಸಮಾಜದಲ್ಲಿ ಶಾಂತಿಯ ಬೀಜವನ್ನು ಬಿತ್ತಲಿ ಎಂದ ಅವರು ರಾಯರ ತತ್ವಾದರ್ಶವನ್ನು ಎಲ್ಲ ಸದ್ಭಕ್ತರು ಪಾಲಿಸಿ ಸುಖಮಯ ಜೀವನ ನಡೆಸಬೇಕು ಎಂದರು.
ಮಹಿಳಾ ಭಕ್ತರಿಂದ ಭಜನಾ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು
ಕಾರ್ಯಕ್ರಮದಲ್ಲಿ ಹುನುಮಾನ ಮಂದಿರದ ಅರ್ಚಕ ಗೋಪಾಲ ಭಸ್ಮೆ ಹಾಗೂ ಮೂಡಲಗಿ, ನಾಗನೂರ, ಕಮಲದಿನ್ನಿ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದರು