ಮೂಡಲಗಿ: ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷದ ಕಾರ್ಯವನ್ನು ಮುನ್ನಡೆಸಲು ಹಾಗೂ ಸಂಘಟನೆಯನ್ನು ವಿಸ್ತರಿಸುವುದಕ್ಕಾಗಿ ಪಕ್ಷದ ಸೂಚನೆಯ ಮೇರೆಗೆ ಬಿಜೆಪಿ ಎಸ್‍ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೂಡಲಗಿಯ ಬಿಜೆಪಿ ಕಾರ್ಯಕರ್ತ ಈರಪ್ಪಾ ಢವಳೇಶ್ವರ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಎಸ್‍ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ಪಕ್ಷದ ವರಿಷ್ಠ ನಾಯಕರಿಗೆ ಈರಪ್ಪಾ ಢವಳೇಶ್ವರ ಧನ್ಯವಾದ ಸಲ್ಲಿಸಿದರು.
IN MUDALGI Latest Kannada News