Breaking News
Home / ಬೆಳಗಾವಿ / ಶಿಕ್ಷಕ ಮಾರುತಿ ದೇಸಾಯಿಗೆ ರಾಜ್ಯಮಟ್ಟದ ಪ್ರಶಸ್ತಿ

ಶಿಕ್ಷಕ ಮಾರುತಿ ದೇಸಾಯಿಗೆ ರಾಜ್ಯಮಟ್ಟದ ಪ್ರಶಸ್ತಿ

Spread the love

ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಶಾಲೆಯ ಹಿಂದಿ ಶಿಕ್ಷಕ ಮಾರುತಿ ದೇಸಾಯಿಗೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಇವರು ಕೊಡಮಾಡುವ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ 2025 ಪ್ರಶಸ್ತಿಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಇದೇ ತಿಂಗಳ 14 ರಂದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆಯುವ ರಾಜ್ಯ ಸಮಾವೇಶದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. ಮಾರುತಿ ದೇಸಾಯಿಯವರು ಮೂಲತ ಗೋಕಾಕ ಗ್ರಾಮದವರಾಗಿದ್ದು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಹಿಂದಿ ಕನ್ನಡ  ಭಾಷೆಗಳಲ್ಲಿ ಮಕ್ಕಳ ಕವನ ಸಂಕಲನ ಭಕ್ತಿಗೀತೆಗಳು, ಕಗ್ಗಗಳು ಹಾಗೂ ತ್ರಿಪದಿಗಳನ್ನು ರಚಿಸಿದ್ದು, ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ.
ಮಾರುತಿಯವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದಕ್ಕೆ ಜಿಲ್ಲಾ ಅದ್ಯಕ್ಷ ವಾಯ್ ಬಿ ಹಂಡಿ ಹಾಗೂ ಕಾರ್ಯದರ್ಶಿ ಜಿ.ಎಮ್.ಬಡಿಗೇರ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ


Spread the love

About inmudalgi

Check Also

ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಿ: ಎಮ್.ಪನೀಶಾಯಣ್ಣ

Spread the loveಬೆಟಗೇರಿ:ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಗ್ರಾಹಕರಿಗೆ, ಗ್ರಾಮೀಣ ವಲಯದ ಕೆನರಾ ಬ್ಯಾಂಕನಿಂದ ದೊರಕುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ