ಮೂಡಲಗಿ : ಮಾತೃಭೂಮಿ ಯುವಕರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಸೆ. 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯಿಂದ ಸಿದ್ದಣ್ಣ ದುರದುಂಡಿ ಯುವಜನ ಕ್ಷೆತ್ರದಲ್ಲಿ ಆಯ್ಕೆಯಾಗಿದ್ದಾರೆ.
ಸಿದ್ದಣ್ಣ ದುರದುಂಡಿ ಅವರು 18 ವರ್ಷಗಳಿಂದ ಯುವಜನ ಸೇವೆ, ಕ್ರೀಡೆ, ಜಾನಪದ ಕಲೆ, ಸಾಹಿತ್ಯ ಸಾoಸ್ಕೃತಿಕ, ಸ್ವಚ್ಛ ಪರಿಸರ, ಅರೋಗ್ಯ ಜಾಗೃತಿ, ಯುವಜನ ಸಂಘಟನೆ, ಧಾರ್ಮಿಕ ಡೊಳ್ಳು ಕುಣಿತ, ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿಗಳು, ಮಹಿಳಾ ಸಬಲೀಕರಣ, ಮುಖ್ಯವಾಗಿ ಯುವಜನ ಸಂಘಟನೆ, ನಿರಂತರ ನಿಶ್ವಾರ್ಥ ಸೇವೆ, ಅನುಪಮ ಅಮೂಲ್ಯ ಸೇವೆಯನ್ನು ಪರಿಗಣಿಸಿ ಮಾತೃ ಭೂಮಿ ಯುವಕರ ಸಂಘ (ರಿ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹರ್ಷ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೆ. 13 ರಂದು ನಡೆಯುವ ಸಾಧಕರ ಸಮಾವೇಶದಲ್ಲಿ ಸಿದ್ದಣ್ಣ ದುರದುಂಡಿ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಭಾರತ ಸರ್ಕಾರದ ಐಸಿಸಿಆರ್ ಸದಸ್ಯರು ಹಾಗೂ ಮಾತೃಭೂಮಿ ಯುವಕರ ಸಂಘದ ಸಂಸ್ಥಾಪಕರಾದ ಡಾ. ಎಸ್ ಬಾಲಾಜಿಯವರು ಆದೇಶ ನೀಡಿದ್ದಾರೆ.
ಸಿದ್ದಣ್ಣ ದುರದುಂಡಿಯವರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಹಲವಾರು ಯುವಕ ಸಂಘಗಳು, ಮಹಿಳಾ ಸಂಘಗಳು, ಯುವತಿ ಮಂಡಳಗಳು, ಕ್ರೀಡಾ ಮತ್ತು ಸಾoಸ್ಕೃತಿಕ ಸಂಘಗಳನ್ನು ಹುಟ್ಟು ಹಾಕುತ್ತಾ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಕೀರ್ತಿ ಸಿದ್ದಣ್ಣ ದುರದುಂಡಿ ಅವರಿಗೆ ಸಲ್ಲುತ್ತದೆ ಎಂದು ಮಾತೃಭೂಮಿ ಯುವಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ರಾಜ್ಯ ಪ್ರಶಸ್ತಿ ಸ್ವೀಕರಿಸಲು ಪ್ರಕಟಣೆಯಲ್ಲಿ ತಿಳಿಸಿ ಅಭಿನಂದಿಸಿದ್ದಾರೆ.