ಮೂಡಲಗಿ: ದೇಶದ ಇತಿಹಾಸದಲ್ಲಿ ತಮ್ಮ ಅಪ್ರತಿಮ ಶೌರ್ಯ ಮತ್ತು ಹೋರಾಟದಿಂದ ಸ್ಮರಣೀಯರಾಗಿರುವ ಕಿತ್ತೂರು ರಾಣಿ ಚನ್ನಮ್ಮ, ಅಹಲ್ಯಾಬಾಯಿ ಹೋಳ್ಕರ್ ಮತ್ತು ಉಳ್ಳಾಲ ಅಬ್ಬಕ್ಕರಂತಹ ವೀರವನಿತೆಯರ ಕೊಡುಗೆಗಳನ್ನು ಸ್ಮರಿಸುವ “ಭರತ ವರ್ಷದ ಮೂವರು ವೀರ ನಾರಿಯರು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘ ಕರ್ನಾಟಕ ಸಹಯೋಗದಲ್ಲಿ ಶನಿವಾರದಂದು ಜರುಗಿತು.
ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯಲ್ಲಪ್ಪಾ ಮೂಡಲಗಿ ಅವರು ಮಾತನಾಡಿ, “ವೀರ ಮಹಿಳೆಯರು ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವುದು ಝಾನ್ಸಿ ರಾಣಿ ಲಕ್ಷ್ಮೀಬಾಯಿ. ಆದರೆ ಅವರμÉ್ಟೀ ಶೌರ್ಯ ಮತ್ತು ಆಡಳಿತ ಕೌಶಲ್ಯ ಹೊಂದಿದ್ದ ಅನೇಕ ವೀರ ವನಿತೆಯರು ನಮ್ಮ ದೇಶದಲ್ಲಿದ್ದಾರೆ. ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಮೊದಲ ಬಂಡಾಯದ ಕಿಡಿಯನ್ನು ಹೊತ್ತಿಸಿದರೆ, ಅಹಲ್ಯಾಬಾಯಿ ಹೋಳ್ಕರ್ ತಮ್ಮ ಜನಪರ ಆಡಳಿತ ಮತ್ತು ಸಾಮಾಜಿಕ ಕಾರ್ಯಗಳಿಂದ ಇತಿಹಾಸದಲ್ಲಿ ಅಮರರಾಗಿದ್ದಾರೆ. ಉಳ್ಳಾಲ ಅಬ್ಬಕ್ಕ ಪೆÇೀರ್ಚುಗೀಸರ ವಿರುದ್ಧ ಹೋರಾಡಿದ ಏಕೈಕ ಮಹಿಳಾ ನಾಯಕಿ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಸುರೇಶ ಬಿ. ಹನಗಂಡಿ ಅವರು ಮಾತನಾಡಿ, ಮೂವರು ವೀರನಾರಿಯರು ಕೇವಲ ಹೋರಾಟಗಾರರಲ್ಲ, ಅವರು ದೇಶ ರಕ್ಷಣೆಯ ಜೊತೆಗೆ ತಮ್ಮ ಪ್ರದೇಶದ ಅಭಿವೃದ್ಧಿಗೂ ಶ್ರಮಿಸಿದವರು. ಅವರ ಜೀವನ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದು, ದೇಶ ಪ್ರೇಮ ಮತ್ತು ನಾಯಕತ್ವ ಗುಣಗಳನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಇಂತಹ ಮಹಾನ್ ವ್ಯಕ್ತಿಗಳ ಜೀವನದಿಂದ ಪಾಠ ಕಲಿಯಬೇಕು. ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಎಂ.ಬಿ. ಕುಲಮೂರ, ಡಾ.ಕೆ.ಎಸ್. ಪರವ್ವಗೋಳ, ಆರ್. ಎಸ್. ಪಂಡಿತ, ವಿ. ವಾಯ್. ಕಾಳೆ, ವಿಲಾಸ ಕೆಳಗಡೆ, ಬಿ.ಬಿ. ವಾಲಿ, ಡಾ. ಆರ್.ಎಂ. ತೋಟಗಿ, ಬಿ.ಸಿ. ಮಾಳಿ, ಸಂತೋಷ ಬಂಡಿ, ಎಂ.ಆರ್. ಕರಗಣ್ಣಿ, ಸಾಗರ ಐದಮನಿ, ಮಲ್ಲಪ್ಪ ಮುರಗೋಡ ಮುಂತಾದವರು ಉಪಸ್ಥಿತರಿದ್ದರು.
ಐಶ್ವರ್ಯ ಚಿಪ್ಪಲಕಟ್ಟಿ ಪ್ರಾರ್ಥಿಸಿದರು. ಪೆÇ್ರ. ಶಂಕರ ನಿಂಗನೂರ ಸ್ವಾಗತಿಸಿದರು. ಪೆÇ್ರ. ಡಿ.ಎಸ್. ಹುಗ್ಗಿ ನಿರೂಪಿಸಿದರು. ಡಾ. ಕೆ.ಎಸ್. ಪರವ್ವಗೋಳ ವಂದಿಸಿದರು.