Breaking News
Home / Uncategorized / ಮೂಡಲಗಿ ಶ್ರೀ ವೇಮನ್ ಸೊಸೈಟಿಗೆ 2.28 ಕೊಟಿ ರೂ. ಲಾಭ

ಮೂಡಲಗಿ ಶ್ರೀ ವೇಮನ್ ಸೊಸೈಟಿಗೆ 2.28 ಕೊಟಿ ರೂ. ಲಾಭ

Spread the love

ಮೂಡಲಗಿ,: ಪಟ್ಟಣದ ಶ್ರೀ ವೇಮನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದ ಕೊನೆಯಲ್ಲಿ 2.28 ಕೋಟಿ ರೂ. ನಿವ್ವಳ ಲಾಭವನ್ನು ಪಡೆದು ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿ ಅಧ್ಯಕ್ಷ ಸಂತೋಷ ಸೋನವಾಲಕರ ಅವರು ಹೇಳಿದರು.
ಪಟ್ಟಣದ ಶ್ರೀ ವೇಮನ್ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ 24 ನೇ ವರ್ಷದ ಸೋಮವಾರ ಸರ್ವಸಾಧಾರಣಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಸದ್ಯ ಶೇರು ಬಂಡವಾಳ 3.37 ಕೋಟಿ ರೂ, ಠೇವುಗಳು 165.22 ಕೋಟಿ ರೂ, ನಿಧಿಗಳು 10.52 ಕೋಟಿ ರೂ, ವಿವಿಧ ಸಾಲಗಳು 103.60 ಕೋಟಿ ರೂ. ವಿತರಿಸಿ, ದುಡಿಯುವ ಬಂಡವಾಳ 188.73 ಕೋಟಿ ರೂ. ಇರುವುದು. ಈಗಾಗಲೇ 8 ಶಾಖೆಗಳನ್ನು ಹೊಂದಿದ್ದು, ಎಲ್ಲ ಶಾಖೆಗಳು ಪ್ರಗತಿಯತ್ತ ಸಾಗುತ್ತೀವೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಸ್ಥೆಗೆ ಸಹಕಾರ ನೀಡಿದ ಗಣ್ಯರನ್ನು ಸನ್ಮಾನಿಸಿದರು. ಎಸ್.ಸಿ.ಮಂಟೂರ, ಎ.ಪಿ.ರೆಡ್ಡಿ ಮಾತನಾಡಿದರು.
ವೇದಿಕೆಯ ಮೇಲೆ ಜಿ.ಟಿ.ಸೋನವಾಲಕರ, ರಮೇಶ ಪ್ಯಾಟಿಗೌಡರ, ಬಸನಗೌಡ ಪ್ಯಾಟಿಗೌಡರ, ರಾಜೇಂದ್ರ ನಾಯಿಕ, ವೆಂಕಣ್ಣ ಗಿಡ್ಡಗೌಡರ ಸಂಘದ ಉಪಾಧ್ಯಕ್ಷ ಹನುಮಂತ ಪ್ಯಾಟಿಗೌಡರ, ನಿರ್ದೇಶಕರಾದ ವಿಜಯಕುಮಾರ ಸೋನವಾಲಕರ, ಪಾಂಡಪ್ಪ ಸೋನವಾಲಕರ, ತಮ್ಮಣ್ಣ ಝಂಡೇಕುರಬರ, ಹನುಮಂತ ದಂಡಪ್ಪನವರ, ಸಿದ್ದಪ್ಪ ಪೂಜೇರಿ, ಸಚಿನ ಸೋನವಾಲಕರ, ಲಕ್ಷ್ಮೀಬಾಯಿ ಸಂತಿ, ಲತಾ ಸತರಡ್ಡಿ, ರಾಮಪ್ಪ ಹಾದಿಮನಿ ಉಪಸ್ಥಿತರಿದ್ದರು.
ಸುವರ್ಣಾ ಮರಾಠೆ, ಪ್ರವೀಣ ಚಿಪ್ಪಲಕಟ್ಟಿ, ಆನಂದ ಅನ್ನಿಗೇರಿ ಅಢಾವೆ ಪತ್ರಿಕೆ ಮಂಡಿಸಿದರು.
ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ ಸ್ವಾಗತಿಸಿದರು. ಶಿಕ್ಷಕರಾದ,ಶಿವಾನಂದ ಕುರಣಗಿ, ದಬಾಡಿ ನಿರೂಪಿಸಿದರು. ಬಾಹುಬಲಿ ಜೋಕಿ ವಂದಿಸಿದರು.


Spread the love

About inmudalgi

Check Also

Spread the loveಮೂಡಲಗಿ: ‘ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ’ ಎಂದು ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ