Breaking News
Home / ಬೆಳಗಾವಿ / ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆ

ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆ

Spread the love

ಮೂಡಲಗಿ: ಪಟ್ಟಣದ ಶ್ರೀ ಸಾಯಿ ಮಂದಿರದಲ್ಲಿ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ಸಾಯಿ ಸೇವಾ ಸಮಿತಿಯಿಂದ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಿಕ್ಕಮಕ್ಕಳ ತಜ್ಞ ಡಾ|| ವಿಶಾಲ ಪಾಟೀಲ ಚಾಲನೆ ನೀಡಿ ಮಾತನಾಡಿದ ಅವರು ಆಹಾರದಲ್ಲಿ ಮಿತವಾಗಿ ಎಣ್ಣೆ ಬಳಸಿ, ಕರೆದ ಪದಾರ್ಥಗಳಿಂದ ಹಾಗೂ ದುಶ್ಚಟಗಳಿಂದ ದೂರವಿರಿ, ನಿತ್ಯ ನಗೆ, ನಡಿಗೆ, ಪ್ರಾಣಾಯಾಮ ಯೋಗ ದೊಂದಿಗೆ ಸಾಯಿ ಧ್ಯಾನ ಮಾಡುತ್ತ ಉಲ್ಲಾಸ ಉತ್ಸಾಹದ ಜೀವನ ಸಾಗಿಸಿ ಆರೋಗ್ಯವಂತರಾಗಿ ಇರಲು ಸಲಹೆ ನೀಡಿದರು. ನಿವೃತ್ತ ಶಿಕ್ಷಕ ಸಿ.ಎಂ ಹಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳು ಸಾಯಿ ಮಂದಿರದಿಂದ ಸಂಗೋಳ್ಳಿ ರಾಯಣ್ನ ವೃತ್ತ, ಕಲ್ಮೇಶ್ವರ ವೃತ್ತಗಳ ಮೂಲಕ ಜಾಗೃತಿ ಜಾಥಾ ನಡೆಸಿದರು. ಬಸವರಾಜ ಮುರಗೋಡ ಪ್ರಸಾದ ಸೇವಾ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಡಾ|| ಪದ್ಮಾ ಪಾಟೀಲ, ಕೆ.ಬಿ.ನಾವಳ್ಳಿ, ಹನುಮಂತ ಸೋರಗಾಂವಿ, ಬಿ.ಎಮ್.ನಂದಿ, ಬಿ.ಎಸ್.ಹಂಚಿನಾಳ, ಭೀಮಶಿ ನಾಯ್ಕ, ಬಿ.ಐ. ಹಿರೇಮಠ, ಮಲ್ಲಿಕಾರ್ಜುನ ಹಂಚಿನಾಳ, ಜಗದೀಶ ಸೋನವಾಲಕರ, ದಾನಪ್ಪ ಶೀಲವಂತ ಲಕ್ಷ್ಮಣ ಕಂಕಣವಾಡಿ, ಬಸವಂತ ಬಡಿಗೇರ, ಡಿ.ಬಿ.ಮುತ್ನಾಳ, ಭಾರತಿ ಮಿಲಾನಟ್ಟಿ, ಹೇಮಾ ನಾವಳ್ಳಿ, ಗೀತಾ ಬೂದಿಹಾಳ, ಸುಮಿತ್ರಾ ಖಾನಟ್ಟಿ, ಮತ್ತಿತರರು ಉಪಸ್ಥಿತರಿದ್ದರು.


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ