
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ಯ ಪ್ರತಿಷ್ಠಾಪಿಸಿದ ಶ್ರೀ ದುರ್ಗಾ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಚಕ್ರ ರುದ್ರಾಭಿಷೇಕ ಕಾರ್ಯಕ್ರಮ ಮಂಗಳವಾರ ನೆರವೇರಿತು,
ಶ್ರೀ ಮತ್ಯುಂಜಯ ಈರಯ್ಯ ಹಿರೇಮಠ ಹಾಗೂ ಶ್ರೀ ಗುರುಸಿದ್ದಯ್ಯ ಸಿದ್ದಲಿಂಗಯ್ಯ ಹಿರೇಮಠ ಮತ್ತು ಶ್ರೀ ಮಹಾಂತೇಶ ಮಹಾದೇವ ಗೋರೋಶಿ ಅವರು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಿಸಿದರು ಹಾಗೂ ಮುತೈದೆಯರಿಂದ ಗ್ರಾಮದ ಆದಿದೇವತೆ ಮಹಾಲಕ್ಷ್ಮೀ ದೇವಿಗೆ ಉಡಿತುಂಬುವ ಕಾರ್ಯಕ್ರಮ
ಶ್ರೀ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರಿಂದ ನೆರವೇರಿತು.

ಈ ಸಂಧರ್ಭದಲ್ಲಿ ಮಂಜುಳಾ ಹಿರೇಮಠ, ಕಲ್ಲವ್ವ ನೇರ್ಲಿ, ಗಂಗೂಬಾಯಿ ಬೆಳಕೂಡ, ಶ್ರೀ ಮಠದ ಸಕಲ ಸದ್ಭಕ್ತರು ಮುತೈದೆಯರು ಪಾಲ್ಗೊಂಡಿದ್ದರು.