ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ರವಿವಾರದಂದು 33 ವರ್ಷದ ಓರ್ವ ವ್ಯಕ್ತಿಗೆ ಕೊರೊನಾ ವೈರಸ್ ದೃಟಪಟ್ಟಿದರಿಂದ ತಾಲೂಕಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಯಾದವಾಡ ಗ್ರಾಮದಲ್ಲಿ ಹೊಟೇಲ ನಡೆಸುತ್ತಿದ ಓರ್ವ ವ್ಯಕ್ತಿ ಆನಾರೋಗ್ಯದಿಂದ ಬಾಗಲಕೋಟೆಯ ಆಸ್ಪತ್ರೆಯಲ್ಲಿ ದಾಖಾಲದ ಸಮಯದಲ್ಲಿ ಕೊರೊನಾ ವೈರಸ್ ದೃಡಪಟ್ಟಿದೆ.
ಗ್ರಾಮದಲ್ಲಿ ಕೊರೊನಾ ದೃಡಪಟ್ಟಿದರಿಂದ ಗ್ರಾಮದಲ್ಲಿ ಮುನೇಚ್ಚರಿಕೆ ಕ್ರಮವಾಗಿ ಸ್ಯಾನಿಟೈಜರ್ ಸಿಂಪರೆ ನಡೆಸಿ ಕರೊನಾ ದೃಡಪಟ್ಟ ಏರಿಯಾದಲ್ಲಿ 50 ಮೀಟರ ಸುತ್ತಳತೆ ಸಿಲಡೌನ್ ಮಾಡಲಾಗಿದು, ದೃಡಪಟ್ಟ ವ್ಯಕ್ತಿಯ ಮನೆಯ ಐವರನ್ನು ಕ್ವಾರೆಂಟೇನ್ ಮಾಡಲಾಗಿದೆ.
ಮುಂಜಾಗೃತ ಕ್ರಮವಾಗಿ ಗ್ರಾ.ಪಂ, ಆರೋಗ್ಯ ಮತ್ತು ಪೋಲಿಸ್ ಇಲಾಖೆ, ಆಶಾಕಾರ್ಯಕರ್ತರು, ಮುಖಂಡರ ಸಭೆ ಸೇರಿ ಮುನೇಚರಿಕ್ಕೆ ಕ್ರಮಗಳ ಬಗ್ಗೆ ಚರ್ಚಿಸಿದರು.
ಈ ಸಮಯದಲ್ಲಿ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ್ರ, ಅರೋಗ್ಯ ಸಹಾಯಕ ಎಸ್.ಪಿ.ಕೌಜಲಗಿ, ಎಸ್.ಐ.ಜಂಬಗಿ, ಶ್ರೀಶೈಲ್ ಚೌಡಾಪೂರ, ಕಲ್ಮೇಶ ಗಾಣಿಗೇರ, ಪೊಲೀಸ್ ಇಲಾಖೆಯ ಕೃಷ್ಣಾ ಲಂಕೆನ್ನವರ, ಗ್ರಾ.ಪಂ ಸದಸ್ಯರು, ಸಿಬ್ಬಂದಿ ವರ್ಗದವರು, ಕರವೇ ಕಾರ್ಯಕರ್ತರು, ಮುಖಂಡರು ಇದ್ದರು.
ರಾಜ್ಯದಲ್ಲಿ ಇಂದು 2627 ಜನರಿಗೆ ಕೊರೋನಾ ಸೋಂಕು ತಗುಲಿದೆ. 71 ಜನರು ಸಾವಿಗೀಡಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 1525 ಜನರಿಗೆ ಸೋಂಕು ದೃಢಪಟ್ಟಿದೆ. 45 ಜನರು ಸಾವಿಗೀಡಾಗಿದ್ದಾರೆ.
ಬೆಳಗಾವಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಬೆಳಗಾವಿಯಲ್ಲಿ ಇಂದು ಮೂವರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಈವರೆಗೆ ಒಟ್ಟೂ 12 ಜನರು ಜಿಲ್ಲೆಯಲ್ಲಿ ಸಾವಿಗೀಡಾಗಿದ್ದಾರೆ.
ಇಂದು ಬೆಳಗಾವಿಯ ಶಿವಬಸವನಗರದ 80 ವರ್,ದ ವೃದ್ದೆ, ಅಥಣಿಯ 62 ವರ್ಷದ ವ್ಯಕ್ತಿ ಮತ್ತು ಬೆಳಗಾವಿ ವಿಜಯನಗರದ 57 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.