ಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಭರಮಣ್ಣ ಉಪ್ಪಾರ ಹೇಳಿದರು
ಅವರು ಸ್ಥಳೀಯ ಶ್ರೀ ಭಗೀರಥ ಉಪ್ಪಾರ ಅಭಿವೃದ್ಧಿ ಸೇವಾ ಸಂಘದಿಂದ ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಕುಲಗುರುಗಳಾದ ಶ್ರೀ ಪುರುಷೋತ್ತಮಾನಂದ ಮಹಾಸ್ವಾಮಿಗಳು, ಶಾಸಕ ಪುಟ್ಟರಂಗಶೆಟ್ಟಿ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರು ಸತೀಶ ಜಾರಕಿಹೊಳಿ ಮತ್ತು ಮತ್ತು ಮಹಿಳಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಇವರು ನಮ್ಮ ಉತ್ತರ ಕರ್ನಾಟಕದ ಉಪ್ಪಾರ ಸಮುದಾಯದವರ ಮೇಲೆ ಅಭಿಮಾನವನ್ನು ಇಟ್ಟುಕೊಂಡು ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಉಪ್ಪಾರ ಸಮುದಾಯದ ಕುಂದು ಕೊರತೆಗಳನ್ನು ಆಲಿಸಿ ಕರ್ನಾಟಕ ರಾಜ್ಯದ ನನ್ನ ಎಲ್ಲಾ ಸಮುದಾಯದವರಿಗೆ ಅಭಿವೃದ್ಧಿಯತ್ತ ಸಾಗಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ನ್ಯಾಯವಾದಿ ಲಕ್ಷ್ಮಣ ವಾಯ್. ಅಡಿಹುಡಿ ಮಾತನಾಡುತ್ತಾ ಕರ್ನಾಟಕದ ಪ್ರತಿಯೊಂದು ತಾಲೂಕು ಮತ್ತು ಹಳ್ಳಿಗಳಲ್ಲಿ ಉಪ್ಪಾರರ ಸಮುದಾಯ ಭವನಗಳನ್ನು ನಿರ್ಮಿಸಬೇಕು ಮತ್ತು ಸಮಾಜದ ಬೇಡಿಕೆಗಳನ್ನ ರಾಜ್ಯ ಸರ್ಕಾರ ಬರುವ ಬಜೆಟ್‍ನಲ್ಲಿ ಅಂಗೀಕರಿಸಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು. ನಮ್ಮ ಮೂಡಲಗಿ ತಾಲೂಕಿನಲ್ಲಿ ಉಪ್ಪಾರ ಸಮಾಜದ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕು ಅμÉ್ಟೀ ಅಲ್ಲದೆ ಈಗಾಗಲೇ ಕುಲಶಾಸ್ತ್ರ ಅಧ್ಯಯನ ಪೂರ್ಣಗೊಂಡಿದ್ದು ಸದರಿ ವರದಿಯನ್ನು ಅಂಗೀಕರಿಸಿ ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ನೀಡುವ ಎಲ್ಲಾ ಸಹಾಯ ಮತ್ತು ಸವಲತ್ತುಗಳನ್ನು ಉಪ್ಪಾರ ಸಮಾಜಕ್ಕೆ ನೀಡಬೇಕು ಎಂದರು
ಕಾರ್ಯಕ್ರಮದಲ್ಲಿ ಈಶ್ವರ ಕಂಕಣವಾಡಿ,ಹನಮಂತ ಕಂಕಣವಾಡಿ,ಸುಭಾಸ ಗೊಡ್ಯಾಗೊಳ,ಅಜ್ಜಪ್ಪಾ ಕಂಕಣವಾಡಿ,ಭಬ್ರವಾನ ಬಂಡ್ರೋಳಿ, ಮುಕೇಶ ಕಂಕಣವಾಡಿ, ಮುತ್ತಪ್ಪಾ ಬಿರನಾಳ, ಮಲ್ಲಪ್ಪ ಕಂಕಣವಾಡಿ,ಭಗವಂತ ಉಪ್ಪಾರ,ಬಸು ಕಂಕಣವಾಡಿ,ಭಿರಪ್ಪ ವನಶಣ್ಣಿ,ಅಲ್ಲಪ್ಪ ಕಂಕಣವಾಡಿ, ರಮೇಶ ಉಪ್ಪಾರ, ಶಿವಬಸು ಕಂಕಣವಾಡಿ ಮುಂತಾದವರು ಭಾಗವಹಿಸಿದರು.
