Breaking News
Home / ಬೆಳಗಾವಿ / *ರಾಗಿಣಿ ನಟನೆಯ ಹಸಿರು ಬಳೆ ಹಾಸ್ಯ ನಾಟಕದ ಉದ್ಘಾಟನೆ ಸಮಾರಂಭ ನಾಳೆ.

*ರಾಗಿಣಿ ನಟನೆಯ ಹಸಿರು ಬಳೆ ಹಾಸ್ಯ ನಾಟಕದ ಉದ್ಘಾಟನೆ ಸಮಾರಂಭ ನಾಳೆ.

Spread the love

ಮೂಡಲಗಿ: ಇಲ್ಲಿನ ಕುಮಾರ್ ಗಿರಡ್ಡಿಯವರ ಜಾಗದಲ್ಲಿ ಹಾಕಿರುವ ಭವ್ಯ ರಂಗ ಸಜ್ಜಿಕೆಯಲ್ಲಿ ತೆಗ್ಗಿಹಳ್ಳಿಯ ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘದ ಆಶ್ರಯದಲ್ಲಿ ಹಸಿರು ಬಳೆ ಎಂಬ ಹಾಸ್ಯಭರಿತ ನಾಟಕದ ಉದ್ಘಾಟನಾ ಸಮಾರಂಭವು ಗುರುವಾರ ದಿನಾಂಕ ಅ.16 ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ.

ಶ್ರೀ ಶಿವಬೋಧರಂಗ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಅವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸುವರು. ಬೆಮುಲ್ ಅಧ್ಯಕ್ಷರು ಹಾಗೂ ಅರಭಾವಿ ಕ್ಷೇತ್ರದ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ಗೋಕಾಕ ಲಕ್ಷ್ಮೀ ಎಜ್ಯುಕೇಶನ್ ಸೊಸೈಟಿ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ ಹಾಗೂ ಉಪ್ಪಾರ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಭರಮಣ್ಣ ಉಪ್ಪಾರ ಆಗಮಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಶ್ರೀಶೈಲ ಗುಡುಮೆ, ಕಾಶೀಮಅಲಿ ಸೊಸೈಟಿ ಅಧ್ಯಕ್ಷ ಅನ್ವರ್ ನದಾಫ್, ಜಾನಪದ ಕಲಾವಿದ ಶಬ್ಬೀರ್ ಡಾಂಗೆ, ಉದ್ದಿಮೆದಾರ ಕುಮಾರ ಗಿರಡ್ಡಿ, ತುಕ್ಕಾನಟ್ಟಿಯ ಗಂಗಾರಾಮ ಗುಡಗುಡಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಪಿ ಎಸ್ ಐ ರಾಜು ಪೂಜೇರಿ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ ಎಸ್ ನಾಗನ್ನವರ, ಪುರಸಭೆ ಮಾಜಿ ಉಪಾಧ್ಯಕ್ಷ ಅಜೀಜ ಡಾಂಗೆ, ಹಿರಿಯ ಪತ್ರಕರ್ತರಾದ ಬಾಲಶೇಖರ ಬಂದಿ ಹಾಗೂ ಅಲ್ತಾಫ್ ಹವಾಲ್ದಾರ್, ಹೆಸರಾಂತ ನಿರೂಪಕ ಶಿಕ್ಷಕ ಬಸವರಾಜ ಸಸಾಲಟ್ಟಿ, ಹಿರಿಯ ಕಲಾವಿದ ಗಿರೀಶ ಕರಡಿ ಹಾಗೂ ಕಲಾ ಪೋಷಕ ಅಜ್ಜಪ್ಪ ಅಂಗಡಿ ಉಪಸ್ಥಿತರಿರುವರು.
ಅ.16 ಮತ್ತು 17 ರಂದು ಎರಡು ದಿನ ಸಂಚಾಲಕಿ ಆಶಾರಾಣಿ ವಿಜಯಪುರ ಅವರ ನೇತೃತ್ವದಲ್ಲಿ ನಡೆಯುವ ಹಸಿರು ಬಳೆ ನಾಟಕದಲ್ಲಿ ಮಜಾ ಭಾರತ, ಮಜಾ ಟಾಕೀಸ್, ಗಿಚ್ಚ ಗಿಲಗಿಲಿ ಮತ್ತು ಭರ್ಜರಿ ಬ್ಯಾಚುಲರ್ ಸೀಜನ್ ನಂ 1 ಖ್ಯಾತಿಯ ರಾಗಿಣಿ (ರಾಘು) ಇವರು ಮುಖ್ಯ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಂಪನಿ ಮಾಲಿಕರಾದ ಖತಾಲಸಾಬ ಬಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ