ಮೂಡಲಗಿ: ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆಗಳ ನಡುವಿನ ಹೋರಟವಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರಗಳು ತಾವು ತೆಗೆದುಕೊಳ್ಳುವ ತೆರಿಗೆ ಹನ ಕಡಿಮೆ ಮಾಡಿ, ರೈತರ ಬೇಡಿಕೆ ಇಡೆರಿಸಬೇಕು. ರೈತರು ಯಾವೂದೇ ಕಪ್ಪು ಚುಕ್ಕೆ ಬಾರದಂತೆ ಹೋರಾಟ ಮಾಡಿ ಎಂದು ಕೋಲಾಪೂರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಗುರುವಾರದಂದು ಗುರ್ಲಾಪೂರ್ ಕ್ರಾಸ್ ಬಳಿ ನಡೆಯುತ್ತಿರುವ ರೈತರು ಕಬ್ಬಿನ ದರ ನಿಗದಿಗಾಗಿ ಮಾಡುತ್ತಿರುವ ಎಂಟನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟಕ್ಕೆ ಆಗಮಿಸಿ ಮಾತನಾಡಿ,ಪ್ರತಿ ವರ್ಷ ಎಲ್ಲ ವಸ್ತುಗಳ, ಕೃಷಿಗೆ ಬೇಕಾದ ಸಲಕರಣೆಗಳ ಬೆಲೆ ಏರಿಕೆಯಾಗುತ್ತದೆ. ಆದರೆ ರೈತರು ಪ್ರತಿ ವರ್ಷ ಬೆಳೆದ ಬೆಳೆಗಳಿಗೆ ಉತ್ತಮ ದರ ಕೇಳುವ ಅಧಿಕಾರ ಇಲ್ಲವಾ ಎಂದು ಸರಕಾರಗಳ ವಿರುದ್ದ ಗುಡುಗಿದರು.
ಶಿರೋಳದ ಶ್ರೀ ರಾಮಾರೂಢ ಸ್ವಾಮಿಗಳು, ಹುಲ್ಲೋಲಿಯ ಶ್ರೀ ಪರಮಾನಂದ ಸ್ವಾಮಿಗಳು, ಬೆಳಗಲಿಯ ಸದಾಶಿವ ಗುರುಜಿ, ವಿಜಯಸಿದ್ದೇಶ್ವರ ಸ್ವಾಮಿಗಳು, ನಿಪ್ಪಾಣಿಯ ಪ್ರಾಣಲಿಂಗ ಶ್ರೀಗಳು, ಯರಗುದ್ರಿಯ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಇದ್ದರು.
IN MUDALGI Latest Kannada News