ಮೂಡಲಗಿ: ಉತ್ತರ ಕರ್ನಾಟಕದ ಮತ್ತು ಜಿಲ್ಲೆಯ ಜಾಗೃತ ದೇವರಾದ ಮೂಡಲಗಿ ತಾಲೂಕಿನ ಕಲ್ಲೋಳಿಯ ಶ್ರೀ ಹಣಮಂತ ದೇವರ ಜಾತ್ರಾ ಕಾರ್ತಿಕೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಸಾರಿಗೆ ಇಲಾಖೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಬೇಕೆಂದು ಕಲ್ಲೋಳಿ ಯುವಜನ ಸೇವಾ ಸಂಘದ ಅಧ್ಯಕ್ಷರು ಶ್ರೀ ಪರಶುರಾಮ ಇಮಡೇರ ಸಾರಿಗೆ ಇಲಾಖೆಯವರಿಗೆ ಮನವಿ ಮಾಡಿದ್ದಾರೆ.
ಡಿ.6-ರಿಂದ 13- ವರೆಗೆ ಜರಗುವುದು. ಜಾತ್ರೆಗೆ ಗೋಕಾಕ, ರಾಯಬಾಗ, ಅಥಣಿ, ಹಾಗೂ ಹುಕ್ಕೇರಿ ಘಟಕಗಳಿಂದ ವಿಶೇಷ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಭಕ್ತರಿಗೆ ಅನುಕ್ಕುಲ ಮಾಡಿಕೊಡಬೇಕು.
ಕಲ್ಲೋಳಿ ಪ್ರಸಿದ್ಧ ದೇವಸ್ಥಾನವಾದ ಶ್ರೀ ಹಣಮಂತ ದೇವರ ಜಾತ್ರೆಗೆ ಕರ್ನಾಟಕ ನಾಡಿನಾದ್ಯಂತ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ರಾಜ್ಯ ಮತ್ತು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಅಪಾರ ಭಕ್ತ ಸಮೂಹ ದೇವರ ದರ್ಶನಕ್ಕೆ ಆಗಮಿಸುತ್ತಿದು, ಭಕ್ತಾದಿಗಳಿಗೆ ಬಸ್ಸಿನ ಕೊರತೆ ಆಗದಂತೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಮುಖ್ಯ ಅಧಿಕಾರಿಗಳಿಂದ ಸುತ್ತಮುತ್ತಲಿನ ತಾಲೂಕು ಬಸ್ ಘಟಕಗಳಿಂದ ವ್ಯವಸ್ಥೆ ಮಾಡಬೇಕೆಂದು ಎಂದು ಆಗ್ರಹಿಸಿದ್ದಾರೆ
IN MUDALGI Latest Kannada News