Breaking News
Home / ಬೆಳಗಾವಿ / ಪಂಚಾಯತ ನೌಕರರಿಗೆ ರೂ.೩೬ ಸಾವಿರ ಕನಿಷ್ಠ ವೇತನ ನಿಗದಿಗಾಗಿ ಒತ್ತಾಯಿಸಿ ಡಿ. 20ರಂದು “ಬೆಂಗಳೂರು ಚಲೋ”

ಪಂಚಾಯತ ನೌಕರರಿಗೆ ರೂ.೩೬ ಸಾವಿರ ಕನಿಷ್ಠ ವೇತನ ನಿಗದಿಗಾಗಿ ಒತ್ತಾಯಿಸಿ ಡಿ. 20ರಂದು “ಬೆಂಗಳೂರು ಚಲೋ”

Spread the love

ಪಂಚಾಯತ ನೌಕರರಿಗೆ ರೂ.೩೬ ಸಾವಿರ ಕನಿಷ್ಠ ವೇತನ ನಿಗದಿಗಾಗಿ ಒತ್ತಾಯಿಸಿ ಡಿ. 20ರಂದು “ಬೆಂಗಳೂರು ಚಲೋ”

ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ಪಂಚಾಯತ ನೌಕರರು ಬಿಲ್ ಕಲೆಕ್ಟರ್‌ಗಳಾಗಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಫರೇಟರ್‌ಗಳಾಗಿ, ವಾಟರಮನ್, ಸಿಪಾಯಿ, ಸ್ವಚ್ಛತಾಗಾರರು ಮತ್ತು ಸ್ವಚ್ಛವಾಹಿನಿ ಎಂಬ ಮಹಿಳಾ ಚಾಲಕಿ, ಸಹಾಯಕಿಯರನ್ನು ಒಳಗೊಂಡು ದುಡಿಯುತ್ತಿರುವ 63 ಸಾವಿರ ಜನರಿಗೆ ಕನಿಷ್ಠ 36 ಸಾವಿರ ವೇತನ ನಿಗದಿಗಾಗಿ ಒತ್ತಾಯಿಸಿ ಡಿ. 20 ರಂದು “ಬೆಂಗಳೂರು ಚಲೋ” ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು  ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಎಮ್.ಜೈನೆಖಾನ್  ಹೇಳಿದರು.
ಅವರು ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿ ಮಾತನಾಡಿ, ಕಳೆದ 20-25 ವರ್ಷಗಳಿಂದ ದುಡಿಯುತ್ತಿರುವ ಪಂಚಾಯತ ನೌಕರರು ಕನಿಷ್ಠ ಕೂಲಿ ಕಾಯಿದೆಯಲ್ಲಿದ್ದರೂ ಸಮಯಕ್ಕೆ ಸರಿಯಾಗಿ ವೇತನ ಪರಿಷ್ಕರಣೆ ಆಗದೆ ಕನಿಷ್ಠ ವೇತನದಿಂದ ವಂಚಿತರಾಗಿದ್ದಾರೆ. ಇವತ್ತಿನ ಬೆಲೆ ಏರಿಕೆಯ ದಿನಮಾನಗಳಲ್ಲಿ ಕುಟುಂಬ ನಡೆಸಿಕೊಂಡು ಹೋಗುವುದು ಪಂಚಾಯತ ನೌಕರರಿಗೆ ತುಂಬಾ ಕಷ್ಟವಾಗಿದೆ. ಹಲವಾರು ಬಾರಿ ಹೋರಾಟದ ಮೂಲಕ ಸರಕಾರದ ಗಮನ ಸೆಳೆದಿದ್ದರು ಕನಿಷ್ಠ ವೇತನ ನಿಗದಿಗೊಳಿಸಲು ಒತ್ತಾಯಿಸಿದ್ದರು ಸರಕಾರ ಇನ್ನೂವರೆಗೆ ಮೀನಾಮೇಷ ಏಣಿಸುತ್ತಿದೆ. ಅಧಿಕಾರಿಗಳಿಗೆ ಕೇಳಿದರೆ ಕನಿಷ್ಠ ವೇತನದ ಕಡತ್ ಆರ್ಥಿಕ ಇಲಾಖೆಯಲ್ಲಿದೆ ಎಂದು ಜಾರಿಕೊಳ್ಳುತ್ತಾರೆ. ಆರ್ಥಿಕ ಇಲಾಖೆಯು ಮಾನ್ಯ ಮುಖ್ಯಮಂತ್ರಿಗಳು ನಿರ್ವಹಿಸುತ್ತಿರುವುದರಿಂದ ಕೂಡಲೆ ಕನಿಷ್ಠ ವೇತನ ರೂ.36 ಸಾವಿರ ನಿಗದಿಗೊಳಿಸಬೇಕು.
ಸ್ವಚ್ಛಭಾರತ ಮಿಷನ್ ಯೋಜನೆಯಡಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ವಾಹನ ಚಾಲಕರ ತರಬೇತಿ ನೀಡಿ ಸಂಜೀವಿನಿ ಒಕ್ಕೂಟದಿಂದ ನೇಮಕಾತಿ ಮಾಡಿಕೊಂಡು ಈ ಮಹಿಳಾ ನೌಕರರಿಗೆ ಗುಲಾಮರಂತೆ ದುಡಿಸಿಕೊಳ್ಳಲಾಗುತ್ತಿದೆ. ಸ್ವಚ್ಛವಾಹಿನಿ ನೌಕರರಿಗೆ ಒಂದು ನಿಗದಿತ ವೇತನ ನೀಡಬೇಕೆಂದು ಹಾಗೂ ಇವರಿಗೆ ಪಂಚಾಯತ ನೌಕರರು ಎಂದು ಪರಿಗಣಿಸಬೇಕೆಂದು ಅಧಿಕಾರಿಗಳ ಜೊತೆ ೨-೩ ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರತಿಕ್ರಿಯೆ ಇಲ್ಲ.
ಪಂಚಾಯತ ನೌಕರರಿಗೆ ಸೇವಾ ಹಿರಿತನದ ಆಧಾರದಲ್ಲಿ ವೇತನ ನಿಗದಿಯಾಗಬೇಕು, ನಿವೃತ್ತಿಯಾದರೆ ಗ್ರಾಮ ಸಹಾಯಕರಿಗೆ ನೀಡಿದಂತೆ ರೂ.10 ಲಕ್ಷ ಇಡಗಂಟು ನೀಡಬೇಕು, ಪ್ರತಿ ಪಂಚಾಯತಗೆ ದ್ವೀ-ದರ್ಜೆ ಲೆಕ್ಕ ಸಹಾಯಕರ ಹುದ್ದೆ ತುಂಬಬೇಕು, ದುಡಿಯುವ ಜನರ ಬಿಪಿಎಲ್ ಕಾರ್ಡ್ ರದ್ದುಗೊಳಿಸಬಾರದು, 2ನೇ ಡಾಟಾ ಎಂಟ್ರಿ ಆಫರೇಟರ್ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಡಿ.20 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಅನಿರ್ದಿಷ್ಟ ಧರಣಿ ಕಾರ್ಯಕ್ರಮ ನಡೆಸಲಾಗುವುದು. ಧರಣಿಯಲ್ಲಿ
ಬೆಳಗಾವಿ ಜಿಲ್ಲೆಯ ಎಲ್ಲ ಪಂಚಾಯತ ನೌಕರರು ಕೆಲಸಗಳನ್ನು ಬಂದ್ ಮಾಡಿ ಈ ಹೋರಾಟದಲ್ಲಿ  ಭಾಗವಹಿಸಬೇಕೆಂದು ಜಿಲ್ಲಾ ಅಧ್ಯಕ್ಷ ಜಿ.ಎಮ್.ಜೈನೆಖಾನ್ ವಿನಂತಿಸಿದರು.
 ಈ ಸಮಯದಲ್ಲಿ ಕಾರ್ಯದರ್ಶಿ ಮಡ್ಡೆಪ್ಪ ಭಜಂತ್ರಿ,
ಹುಕ್ಕೇರಿ ತಾಲೂಕಾ  ಅಧ್ಯಕ್ಷ ಯಲ್ಲಪ್ಪ ನಾಯಿಕ,
 ರಾಮದುರ್ಗ ತಾಲೂಕಾ ಅಧ್ಯಕ್ಷ ದಿಲೀಪ ಭೋವಿ, ಮೂಡಲಗಿ ತಾಲೂಕ ಅಧ್ಯಕ್ಷ ರಮೇಶ ಹೋಳಿ, ಕಾರ್ಯದರ್ಶಿ ಬಸವರಾಜ್ ಮಿರ್ಜಿ ಇದ್ದರು

Spread the love

About inmudalgi

Check Also

ಶ್ರೀದೇವಿಯು ಮಹಾನ್ ಶಕ್ತಿ ದೇವತೆಯಾಗಿದ್ದಾಳೆ:ಬಸವಂತ ಕೋಣಿ

Spread the loveಶ್ರೀದೇವಿಯು ಮಹಾನ್ ಶಕ್ತಿ ದೇವತೆಯಾಗಿದ್ದಾಳೆ:ಬಸವಂತ ಕೋಣಿ ಬೆಟಗೇರಿ:ಶ್ರೀದೇವಿಯ ಮೇಲೆ ನಂಬಿಕೆ ಇಟ್ಟು ನಡೆದುಕೊಂಡವರ ಇಷ್ಟಾರ್ಥಗಳನ್ನು ಇಡೇರಿಸುತ್ತಾಳೆ. ಶ್ರೀದ್ಯಾಮವ್ವದೇವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ