
ಮೂಡಲಗಿ : ಬರಿದಾದ ಎದೆಯಲ್ಲಿ ಅಕ್ಷರಗಳನ್ನು ಬಿತ್ತಿಬದುಕಿಗೆ ದಾರಿ ತೋರಿದ ನಮ್ಮೋರ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಅತ್ಯಂತ ವಿಜ್ರಂಭsಣೆಯಿಂದ ನಡೆಸುತ್ತಿರುವ ಮುಸುಗುಪ್ಪಿ ಗ್ರಾಮದ ಜನರ ಕಾರ್ಯ ಅಭಿನಂದನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಸಮೀಪದ ಮುಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದರ ಅನುದಾನದಲ್ಲಿ ನಿರ್ಮಾಣವಾದ ರಂಗಮಂದಿರ ಉದ್ಘಾಟಿಸಿ ಮಾತನಾಡಿದರು.
ಅನ್ನ.ಆರೋಗ್ಯ.ಅಕ್ಷರ ಹಾಗೂ ಆಶ್ರಯ ಇವು ಮನುಷ್ಯನಿಗೆ ಬೇಕಾದ ಬೇಕಾದ ನಾಲ್ಕು ಆಧಾರ ಸ್ಥಂಬಗಳು ಇವುಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವದೇ ಅಕ್ಷರ ಜ್ಞಾನ.ಅಂತಹ ಅಕ್ಷರ ಜ್ಙಾನ ದೇಗುಲದ ಶತಮಾನೋತ್ಸವ ಸಮಾರಂಭದಲ್ಲಿ ಇಡೀ ಗ್ರಾಮದ ಹಳೆಯ ವಿದ್ಯಾರ್ಥಿಗಳು ಸೇರಿ ಅಭಿವೃದ್ದಿ ಪಡಿಸುವ ಮೂಲಕ ಒಳೆಯ ಕಾರ್ಯಕ್ಕೆ ಮುನ್ನುಡಿ ಹಾಕಿದ್ದಾರೆ ಎಂದರು,
ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ರೂ 50 ಲಕ್ಷಕ್ಕಿಂತ ಹೆಚ್ಷು ಅನುದಾನವನ್ನು ಮುಸಗುಪ್ಪಿ ಗ್ರಾಮಕ್ಕೆ ನೀಡಿದನ್ನು ಸ್ಮರಿಸಿದರು ಗ್ರಾಮಸ್ಥರು ಸಹಕಾರ ನೆನದು ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಂಸದ ಜಗದೀಶ ಶೆಟ್ಟರ ಮಾತನಾಡಿ. ಶೈಕ್ಷಣಿಕ ವಿಷಯ ಎಲ್ಲರಲ್ಲಿ ಜಾಗೃತಿ ಬಂದಿದೆ ಇದರಿಂದ ಹಳ್ಳಿಗಳಲ್ಲಿನ ಹೊಸ ಪ್ರತಿಭೆಗಳು ಹೊರ ಬರುತ್ತಿವೆ, ಇಂಗ್ಲೀಷ ಕಲಿತರೆ ಮಾತ್ರ ನಾವು ಜಾಣರು ಎಂಬ ತಪ್ಪು ಕಲ್ಪನೆಯನ್ನು ಪಾಲಕರು ಬೀಡಬೇಕು ನಾನು ಸಹ ಮಾತೃ ಭಾಷೆಯಲ್ಲಿ ಶಾಲೆಯಲ್ಲಿ ಕಲಿತು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ ಕೀಳರಿಮೇ ಬಿಟ್ಟು ಮಾತೃ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು. ಅತಿಯಾದ ವಿದ್ಯಾಭ್ಯಾಸನಂತರ ತಂದೆ ತಾಯಿಯನ್ನು ಬಿಟ್ಟು ಬೀಡಬೇಡಿಎಂದರು,
ವಿಪ ಸದಸ್ಯ ಹಣಮಂತ ನಿರಾಣಿ ಮಾತನಾಡಿ. ಶಿಕ್ಷಣ ಮಹತ್ವ ಬಹಳ ದೊಡ್ಡದಾಗಿದೆ ಪ್ರತಿಯೋಬ್ಬರು ಶಿಕ್ಷಣನಕ್ಕೆ ಒತ್ತು ನೀಡುತ್ತಿರುವದು ಸಂತಸ ವಿಷಯವಾದರು ನೌಕರಿಗೆ ಬೇರೆಯವರ ಹತ್ತಿರ ಕೈಚಾಚದೆ ಸಾವಲಂಬನೇಯ ಉದ್ಯೋಗಕ್ಕೂ ಆಧ್ಯತೆ ನೀಡಬೇಕು ಎಂದರು,
ಕವಿತಾಳದ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿದರು
ದಿವ್ಯ ಸಾನಿದ್ಯವಹಿಸಿದ ಹೊಸಗುರ್ಗದ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು.ಗೋಕಾಕದ ಶ್ರೀ ಬಸವಪ್ರಭು ಮಹಾಸ್ವಾಮಿಗಳು.ಹಂದಿಗುAದದ ಶ್ರೀ ಶಿವಾನಂದ ಮಹಾಸ್ವಾಮಿಗಳು ಸಾನಿದ್ಯವಹಿಸಿ ಆಶಿರ್ವಚನ ನೀಡಿದರು.
ನಿವೃತ್ತ ಶಿಕ್ಷಕ ನಿಂಗಪ್ಪ ಯಕ್ಕುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ವೇದಿಕೆ ಮೇಲೆ ಶಿಕ್ಷಣ ಇಲಾಖೆಯ ಡಿ.ವಾಯ್.ಪಿ.ಸಿ ರೇವತಿ ಮಠದ.ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹೀರೆಮಠ. ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಸ ಪಾಟೀಲ. ಎಸ್ ಡಿ ಎಮ್ ಸಿ ಅದ್ಯಕ್ಷ ಬಾಲಗೌಡ ಪಾಟೀಲ. ಓಸಾಟ್ ಸಂಸ್ಥೆಯ ಗೋಪಾಲ ಹಂಜಕ್ಕಿ. ಬಸವರಾಜ ಗಾಡವಿ. ಪ್ರಕಾಶ ಗೊಂಧಿ, ನಿಂಗಪ್ಪ ಯಕ್ಕುಂಡಿ, ಸಂಜು ಹೊಸಕೋಟಿ, ಬಾಳಪ್ಪ ಗಂಗನ್ನವರ, ಮುರಗೇಪ್ಪ ಗಾಡವಿ, ಶಿವಾನಂದ ಕಂಬಾರ, ಬಾಳೇಶ ಬುಜನವರ, ಮಲ್ಲಕಾರ್ಜುನ ಬುಜನ್ನವರ, ನಿಂಗಪ್ಪ ಬಡ್ನಿಂಗೋಳ ಇದ್ದರು, ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸತ್ಕರಿಸಿದರು ಗ್ರಾಮಸ್ಥರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿದ್ದರು,
ಶಿಕ್ಷಕ ಮಲ್ಲಿಕಾರ್ಜುನ ಸುಭಾಪೂರಮಠ ಸ್ವಾಗತಿಸಿದರು, ಶಿಕ್ಷಕ ಎಸ್ ಕೆ ಮಠದ ನಿರೋಪಿಸಿದರು, ಪ್ರಭಾರಿ ಮುಖ್ಯೋಪಾಧ್ಯಾಯ ಶಂಕರ ಗಾಡವಿ ವಂದಿಸಿದರು,
ಪ್ರತಿ ವರ್ಷ ಪ್ರವಾಹದಿಂದ ಮುಳುಗಡೆಯಾಗುವ ಮುಸಗುಪ್ಪಿ ತಿಗಡಿ ಸಂಪರ್ಕದ ಸೇತುವೆಯನ್ನು ಎತ್ತರಿಸುವ ಕುರಿತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಯ ಸಚಿವ ನಿತೀನ ಗಡ್ಕರಿ ಅವರ ಮುಂದೆ ಪ್ರಸ್ತಾವಣೆಯನ್ನು ಸಲ್ಲಿಸಲಾಗಿದ್ದು ಸುಮಾರು 50 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿ ಕೊಳ್ಳಲು ಒತ್ತಾಯಿಸಲಾಗಿದ್ದು ಅದಕ್ಕೆ ನಿರಂತರ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು,
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
IN MUDALGI Latest Kannada News