Breaking News
Home / ಬೆಳಗಾವಿ / ‘ಸಿದ್ದೇಶ್ವರ ಶ್ರೀಗಳು ಸದ್ಭಾವ ಬಿತ್ತಿದ ಮಹಾನ್ ಸಂತ’-  ಐ.ಆರ್. ಮಠಪತಿ

‘ಸಿದ್ದೇಶ್ವರ ಶ್ರೀಗಳು ಸದ್ಭಾವ ಬಿತ್ತಿದ ಮಹಾನ್ ಸಂತ’-  ಐ.ಆರ್. ಮಠಪತಿ

Spread the love

ಚಿತ್ರ:
ಮೂಡಲಗಿ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ತೃತೀಯ ಪುಣ್ಯ ಸ್ಮರಣೆ ನಿಮಿತ್ಯವಾಗಿ ಏರ್ಪಡಿಸಿದ್ದ ನುಡಿನಮನದಲ್ಲಿ ಹಾರೂಗೇರಿಯ ಶರಣ ಐ.ಆರ್. ಮಠಪತಿ ಮಾತನಾಡಿದರು.
ಶರಣ ಐ.ಆರ್. ಮಠಪತಿ ಅಭಿಪ್ರಾಯ:

‘ಸಿದ್ದೇಶ್ವರ ಶ್ರೀಗಳು ಸದ್ಭಾವ ಬಿತ್ತಿದ ಮಹಾನ್ ಸಂತ’-  ಐ.ಆರ್. ಮಠಪತಿ

ಮೂಡಲಗಿ: ‘ಸಿದ್ದೇಶ್ವರ ಸ್ವಾಮೀಜಿಗಳು ಜಾತಿ, ಧರ್ಮಕ್ಕಿಂತ ಮಿಗಿಲಾಗಿ ಭಕ್ತರ ಮನದಲ್ಲಿ ಸದ್ಭಾವವನ್ನು ಬಿತ್ತಿದ ಮಹಾನ್ ಸಂತರೆನಿಸಿದ್ದರು’ ಎಂದು ಹಾರೂಗೇರಿಯ ಶರಣ ವಿಚಾರ ವೇದಿಕೆಯ ಅಧ್ಯಕ್ಷ ಐ.ಆರ್. ಮಠಪತಿ ಹೇಳಿದರು.
ಇಲ್ಲಿಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರದಲ್ಲಿ ಸಿದ್ದೇಶ್ವರ ಸ್ವಾಮಿಗಳ ತೃತೀಯ ಪುಣ್ಯಸ್ಮರಣೆ ನಿಮಿತ್ಯವಾಗಿ ಏರ್ಪಡಿಸಿದ್ದ ಗುರುನಮನ ಕಾರ್ಯಕ್ರಮದಲ್ಲಿ ಅನುಭಾವದ ನುಡಿಗಳನ್ನು ಹೇಳಿದ ಅವರು ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆದು ಜಗತ್ತಿಗೆ ಆದರ್ಶರೆನಿಸಿದರು.
ಜ್ಞಾನ, ದಾಸೋಹ, ಪ್ರಕೃತಿ ಮತ್ತು ಸಮಷ್ಟಿಭಾವ ಪ್ರೇರೆಪಿಸಿದರು. ಪ್ರಶಸ್ತಿ, ಅಧಿಕಾರಗಳಿಂದ ದೂರವಿದ್ದ ಶ್ರೀಗಳ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸುವುದರಿಂದ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.
ಸಾನ್ನಿಧ್ಯವಹಿಸಿದ್ದ ಭಾಗೋಜಿಕೊಪ್ಪ ಮುನ್ಯಾಳ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಿದ್ದೇಶ್ವರ ಶ್ರೀಗಳು ಉಪನಿಷತ್ತು, ಪುರಾಣ, ವಚನ, ಪಾಶ್ಚಿಮಾತ್ಯ ದಾರ್ಶನಿಕರ ಸದುವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿ ಜನರಲ್ಲಿ ನೆಲೆತಿಂತ ದುಗುಡಗಳನ್ನು ದೂರಮಾಡುತ್ತಿದ್ದರು. ಅವರೊಬ್ಬ ಈ ಯುಗದ ಸಂತ ಎಂದು ಬಣ್ಣಿಸಿದರು.
ಬೆಂಗಳೂರಿನ ವಕೀಲ ಶಿವಶಂಕರ ಬೋಳಜಾಡರ, ಪ್ರೊ. ಸಂಗಮೇಶ ಗುಜಗೊಂಡ, ಹಾರೂಗೇರಿಯ ನಿವೃತ್ತ ಪಾಚಾರ್ಯ ಪ್ರೊ. ಚಂದ್ರಶೇಖರ ಗುಡಸಿ, ಕಸಾಪ ತಾಲ್ಲೂಕು ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಅರುಣ ಬಣಗಾರ, ನಿಪನಾಳದ ಪ್ರಭು ಮಹಾರಾಜರು ಸಿದ್ದೇಶ್ವರ, ಶಿವಪುತ್ರಯ್ಯ ಮಠಪತಿ ಶ್ರೀಗಳಿಗೆ ನುಡಿನಮನ ಸಲ್ಲಿಸಿದರು.
ಮಹಾಲಕ್ಷ್ಮೀ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂತೋಷ ಪಾರ್ಶಿ ಮತ್ತು ಮಹಾದೇವ ಗೋಕಾಕ ಅವರನ್ನು ಸನ್ಮಾನಿಸಿದರು.
ಹಾರೂಗೇರಿಯ ಸಂಗಪ್ಪ ಬಾಡಗಿ, ನಿವೃತ್ತ ಪ್ರಾಚಾರ್ಯ ಎಂ.ಕೆ. ಪಾಟೀಲ, ಕೆ.ಟಿ. ಗಾಣಿಗೇರ, ಕೆ.ಬಿ. ಪಾಟೀಲ, ಮುತ್ತಪ್ಪ ಈರಪ್ಪನ್ನವರ, ವಿಲಾಶ ನಾಶಿ, ಈಶ್ವರ ಸತರಡ್ಡಿ, ಗಿರಿಗೌಡ ಪಾಟೀಲ, ಶಂಕರ ಚಿಪ್ಪಲಕಟ್ಟಿ, ಡಾ. ಸದಾಶಿವ ಮುರಗೋಡ, ಪ್ರೊ.ಬಿ.ಸಿ. ಪಾಟೀಲ, ಡಿ.ಬಿ. ಪಾಟೀಲ ಮತ್ತಿತರರು ಇದ್ದರು.
ಬಾಲಶೇಖರ ಬಂದಿ ಕಾರ್ಯಕ್ರಮ ನಿರೂಪಿಸಿದರು.

 

 

 


Spread the love

About inmudalgi

Check Also

ಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಸಂತೋಷ ಪಾರ್ಶಿ–ಮಹಾದೇವ ಗೋಕಾಕ ನೇತೃತ್ವ

Spread the loveಮೂಡಲಗಿ30 : ಪಟ್ಟಣದ ಪ್ರತಿಷ್ಠಿತ ಹಾಗೂ ಜನನಂಬಿಕೆ ಗಳಿಸಿದ ಮಹಾಲಕ್ಷ್ಮೀ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ