*ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ : ರೇವತಿ ಮಠದ*
ಮೂಡಲಗಿ : ಅಸ್ಪೃಶ್ಯತೆ ಮತ್ತು ಅಜ್ಞಾನದ ವಿರುದ್ಧ ಅಕ್ಷರವನ್ನೇ ಅಸ್ತ್ರವಾಗಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ಯೋಜನಾ ಸಮನ್ವಯಧಿಕಾರಿಗಳಾದ ಶ್ರೀಮತಿ ರೇವತಿ ಮಠದ ಹೇಳಿದರು.
ಅವರು ಹಳ್ಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉನ್ನತಿಕರಿಸಿದ ಪ್ರೌಢ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜನ್ಮ ದಿನದಂದು ಗೌರವ ನಮನಗಳು ಅರ್ಪಿಸಿ ಮಾತನಾಡುತ್ತಾ ಈ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಸರ್ ಅವರ ಸಹಕಾರದಿಂದ ಉನ್ನತಿಕರಿಸಿದ ಪ್ರೌಢಶಾಲೆಗೆ ಪಾತೋಪಕರಣ ಹಾಗೂ ವಿಟೋಪಕರಣ ಹಾಗೂ ಅತಿಥಿ ಶಿಕ್ಷಕರನ್ನು ನೇಮಿಸಲು ಅವರ ಸ್ವಂತ ಖರ್ಚಿನಲ್ಲಿ ಶಿಕ್ಷಣ ಸುಧಾರಣೆ ಮಾಡುವ ಕಾರ್ಯ ನಿಜವಾಗಲೂ ಶ್ಲಾಘನಿಯವಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ ಶಿಕ್ಷಣ ಮತ್ತು ಸಮಾಜ ಸುಧಾರಣೆ ಮತ್ತು ಸ್ತ್ರೀ ಸಮಾನತೆಗಾಗಿ ಸಾವಿತ್ರಿಬಾಯಿ ಫುಲೆ ಅವರ ತ್ಯಾಗ ಮತ್ತು ಹೋರಾಟ ಪರಿಶ್ರಮ ಸದಾಕಾಲವೂ ಸ್ಪೂರ್ತಿದಾಯಕವಾಗಿತ್ತು. ಅವರು ಹಚ್ಚಿದ ಜ್ಞಾನದ ದೀಪ ಇಂದು ಕೋಟ್ಯಂತರ ಹೆಣ್ಣುಮಕ್ಕಳ ಬಾಳಲ್ಲಿ ಬೆಳಕಾಗಿದೆ ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಭಾಷ್ ಬೆಳಕ್ಕಿ, ಉನ್ನತಿಕರಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯರಾದ ಅಸ್ಲಾಮ್ ಮಕಾoದರ್, ಸುನೀತಾ ಚಿಪ್ಪಲಕಟ್ಟಿ, ಶಾನೂರ್ ನಾವಿ, ಪ್ರಕಾಶ ಮೊರೆ, ರಾಜೇಶ್ವರಿ ಕುರನಿಂಗ್, ಶಶಿಕಲಾ ಬಾಳoಬಿಡ, ಗೋವಿಂದ ಮಾದರ ಹಾಗೂ ಗುರುಗಳು ಗುರುಮಾತೆಯರು ಮತ್ತು ಸಿಬ್ಬಂದಿ ವರ್ಗ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ನೋಟ್ ಬುಕ್, ಅಂಕಲಿಫ್ ಪೆನ್ ಸಿಸ್ ವಿತರಿಸಲಾಯಿತು.
IN MUDALGI Latest Kannada News
