Breaking News
Home / ಬೆಳಗಾವಿ / ಪ್ರಿಮಿಯಂ ಲೀಗ್ ಪ್ರತಿ ಹಳ್ಳಿಗಳಲ್ಲೂ ನಡೆಯುತ್ತಿದೆ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಿಮಿಯಂ ಲೀಗ್ ಪ್ರತಿ ಹಳ್ಳಿಗಳಲ್ಲೂ ನಡೆಯುತ್ತಿದೆ- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

 

ಮೂಡಲಗಿ: ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ. ಪ್ರಪಂಚಾದ್ಯಂತ ಪಸರಿಸಿರುವ ಕ್ರಿಕೆಟ್ ಆಟವು ಪ್ರತಿ ಹಳ್ಳಿ- ಹಳ್ಳಿಗೂ, ಗಲ್ಲಿ- ಗಲ್ಲಿಗೂ ಬೆಳೆದಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಇಲ್ಲಿಗೆ ಸಮೀಪದ ನಾಗನೂರ ಪಟ್ಟಣದ ಹೊರವಲಯದ ಸರ್ಕಾರಿ ಮಾಧ್ಯಮಿಕ ಶಾಲೆಯ ಆವರಣದಲ್ಲಿ ಗುರುವಾರ ನಾಗನೂರ ಪ್ರಿಮಿಯರ್ ಲೀಗ್ (ಎನ್ಪಿಎಲ್)
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರಿಕೆಟ್ ಪಂದ್ಯವು ಅಂತರರಾಷ್ಟ್ರೀಯ ಕ್ರೀಡೆಯಾಗಿದೆ. ಮೊದಲಿನ ಆಟಕ್ಕೂ, ಈಗಿರುವ ಆಟಕ್ಕೂ ಬಹಳ ವ್ಯತ್ಯಾಸವಿದೆ. ಮೊದಲಿನ ಆಟಗಾರರು ಪರಿಶ್ರಮ ವ್ಯಕ್ತಿಯಾಗಿದ್ದರು. ನಾನು ಶಾಲಾ
ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ವಿಶ್ವ ಕಪ್ ಪಂದ್ಯಾವಳಿಗಳು ನಡೆಯುತ್ತಿದ್ದವು. 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತಕ್ಕೆ ಟ್ರೋಫಿ ಬಂದಿತು. ಆಗಿನ ಆಟಗಾರರಿಗೆ ವಿದೇಶಗಳಿಗೆ ತೆರಳಲು ಹಣಕಾಸಿನ ವ್ಯವಸ್ಥೆಗಳಿಲ್ಲ. ಡ್ರೆಸ್ , ಶ್ಯೂಸ್ ಸಹ ವ್ಯವಸ್ಥೆ ಸರಿಯಿರಲಿಲ್ಲ. ಆಟಗಾರರೇ ತಮ್ಮ ಡ್ರೆಸ್ ಗಳನ್ನು ಒಗೆದುಕೊಂಡು ಮುಂದಿನ ಪಂದ್ಯಕ್ಕೆ ಅಣಿಯಾಗುತ್ತಿದ್ದರು. ಇಂತಹ ಕಷ್ಟದ ವೇಳೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ವಿಶ್ವಕಪ್ ಗಳಿಸಿಕೊಟ್ಟ
ಹೆಮ್ಮೆಯಾಗಿದೆ. ನಾಗನೂರು ಪಟ್ಟಣದಿಂದ ಆರಂಭವಾಗಿರುವ ಪ್ರಿಮಿಯಂ ಲೀಗ್ ಪ್ರತಿ ಹಳ್ಳಿಗಳಲ್ಲೂ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಭಾ ಶುಗರ್ಸ್ ನಿರ್ದೇಶಕ ಕೆಂಚನಗೌಡ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಬೆಮುಲ್ ನಿರ್ದೇಶಕ ಮಲ್ಲಪ್ಪ ಪಾಟೀಲ, ಅರ್ಜುನ ನಾಯಿಕವಾಡಿ, ದಿಶಾ ಕಮಿಟಿ ಸದಸ್ಯೆ ಮಂಗಲಾ ಕೌಜಲಗಿ, ಎಸ್.ಎಲ್. ಹೊಸಮನಿ, ಬಸವರಾಜ ತಡಸನ್ನವರ, ಭೀಮಗೌಡ ಹೊಸಮನಿ, ಗಜಾನನ ಯರಗಣವಿ, ಬಾಳಗೌಡ ಪಾಟೀಲ, ಪಿ.ಎಲ್. ಬಬಲಿ, ಸುಭಾಸ ಬೆಳಗಲಿ, ಸತ್ತೆಪ್ಪ ಕರವಾಡಿ, ಚಂದ್ರು ಬೆಳಗಲಿ, ಅಲ್ಲಪ್ಪ ಗುಡೆನ್ನವರ, ಮುತ್ತೆಪ್ಪ ಖಾನಪ್ಪಗೋಳ, ಯಮನಪ್ಪ ಕರಬನ್ನವರ, ಶಂಕರಗೌಡ ಪಾಟೀಲ್ , ಪ್ರವೀಣ ಜೋಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

*ಅರಭಾವಿಯಲ್ಲಿ ಎಆರ್ಟಿಓ ಕಚೇರಿ ಮತ್ತು ಚಾಲನಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

Spread the love ಮೂಡಲಗಿ: ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ