Breaking News
Home / ಬೆಳಗಾವಿ / ಬೃಹತ್ ಹಿಂದೂ ಸಮ್ಮೇಳನ

ಬೃಹತ್ ಹಿಂದೂ ಸಮ್ಮೇಳನ

Spread the love

 

ಮೂಡಲಗಿ: ‘ಪ್ರತಿ ಭಾರತೀಯರಲ್ಲಿ ಹಿಂದೂತ್ವವನ್ನು ಜಾಗೃತಿಗೊಳಿಸಿ ಎಲ್ಲ ಹಿಂದೂಗಳನ್ನು ಒಗ್ಗಟ್ಟಿಸುವುದು ಹಿಂದೂ ಸಮಾವೇಶದ ಮುಖ್ಯ ಉದ್ದೇಶವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಜಯ ನಾಯಕ ಹೇಳಿದರು.

ಪಟ್ಟಣದ ಬಸವ ರಂಗಮಂಟಪದ ಬಳಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯಿಂದ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ದಿಕ್ಕೂಚಿ ಭಾಷಣ ಮಾಡಿದ ಅವರು ಯಾರನ್ನೋ ತೆಗಳುವುದಾಗಲಿ, ರಾಜಕೀಯ ಪಕ್ಷಕ್ಕಾಗಲಿ, ಜಾತಿ, ಮತ, ಪಂಥಕ್ಕೆ ಸಂಘಟನೆಯು ಸೀಮಿತವಾಗಿರುವುದಿಲ್ಲ. ಪ್ರತಿಯೊಬ್ಬರಲ್ಲಿಯೂ ದೇಶಭಕ್ತಿಯನ್ನು ಜಾಗೃತಿಗೊಳಿಸಿ ಹಿಂದೂ ಪರಂಪರೆಯ ವೈಭವವನ್ನು ಸಂರಕ್ಷಿಸುವುದಾಗಿದೆ ಹಿಂದೂಗಳ ಒಟ್ಟೂಗೂಡಿಸುವುದು ಆರ್‍ಎಸ್‍ಎಸ್‍ದ ಉದ್ದೇಶವಾಗಿದೆ ಹೊರತು ತನ್ನ ಯಾವುದೇ ಪ್ರಚಾರಕ್ಕಾಗಿ ಅಲ್ಲ. ಸಾಮರಸ್ಯ, ಕುಟುಂಬ ಪ್ರಭೋಧನ,
ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯ ಹಾಗೂ ಸ್ವದೇಶಿ ಭಾವ ಪಂಚ ಪರಿವರ್ತನೆಗಳ ಮೂಲಕ ಭಾರತವನ್ನು ವಿಶ್ವ ಗುರುವನ್ನಾಗಿಸುವ ನಿಟ್ಟಿನಲ್ಲಿ ದೇಶವನ್ನು ಸಜ್ಜುಗೊಳಿಸುವುದಾಗಿದೆ. ಪ್ರತಿ ಭಾರತೀಯನು ಪಂಚ ಪರಿವರ್ತನೆಗಳ ಅನುಸರಿಸಲು ಜಾಗೃತರಾಗಬೇಕು ಎಂದರು.

ಇನ್ನೋರ್ವ ದಿಕ್ಕೂಚಿ ಭಾಷಣಕಾರ ಯುವಾ ಬ್ರಿಗೇಡ್ ಮಾತನಾಡಿ ‘ಭಾರತಕ್ಕೆ ಪ್ರಾಚೀನ ಇತಿಹಾವಿದೆ. ಪರಕೀಯರ ಮೋಸದ ದಾಳಿಗೆ ಸಿಲುಕಿಕೊಂಡು, ಕಷ್ಟಗಳನ್ನು ಎದುರಿಸಿದ್ದರೂ ಸಹ ಹಿಂದೂತ್ವಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ಉಳಿಸಿಕೊಂಡು ಬಂದಿದೆ. ಭಾರತವು ಯಾರ ವಕ್ರದೃಷ್ಟಿಗೆ ಬೀಳದಂತೆ ಹಿಂದೂ ಸಂಸ್ಕøತಿ, ಪರಪಂರೆಯ ನಲೆಯಲ್ಲಿ ಗಟ್ಟಿಗೊಳಿಸುವುದಕ್ಕೆ ಜಾಗೃತಿಯಾಗಬೇಕಾಗಿದೆ ಎಂದರು.

ಶ್ರೀಧರಬೋಧ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿ ಅಭಿವೃದ್ಧಿಯ ಧಾವಂತದಲ್ಲಿ ಹಿಂದೂ ದೇಶದ ಇತಿಹಾಸ, ಪರಂಪರೆಯನ್ನು ಮರೆಯುತ್ತಿರುವೆವು ಹಾಗಾಗದಂತೆ ಜನರಲ್ಲಿ ಜಾಗೃತಿಗೊಳಿಸುವುದು ಇಂದಿನ ಅನಿವಾರ್ಯತೆ ಇದೆ ಎಂದರು.

ಸಾನ್ನಿಧ್ಯವಹಿಸಿದ್ದ ದತ್ತಾತ್ರಯಬೋಧ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು.

ಏಷಿಯಿನ್ ಪ್ಯಾರಾ ಟೇಂಕ್ವಾಡೋದಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮೀ ರಡರಟ್ಟಿ ಹಾಗೂ ಶಿಕ್ಷಣ ಇಲಾಖೆಯ ರಾಷ್ಟ್ರ ಮಟ್ಟದ ಹಾಕಿ ಟೂರ್ನಿಗೆ ಆಯ್ಕೆಯಾಗಿರುವ ಲಕ್ಷ್ಮೀ ಸಂಜು ಢವಳೇಶ್ವರ ಅವರನ್ನು ಸನ್ಮಾನಿಸಿದರು.
ಸುಣಧೋಳಿಯ ಶಿವಾನಂದ ಸ್ವಾಮೀಜಿ, ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಶಿವಾಪೂರ (ಹ)ದ ಅಡವಿಸಿದ್ದರಾಮ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನಸಿದ್ದ ಸ್ವಾಮೀಜಿ, ಮುನ್ಯಾಳದ ಲಕ್ಷ್ಮಣ ದೇವರು ವೇದಿಕೆಯಲ್ಲಿದ್ದರು.

ಈರಣ್ಣ ಕೊಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಧರ್ಮಟ್ಟಿ ನಿರೂಪಿಸಿದರು.
ಶೋಭಾಯಾತ್ರೆ, ಸಮಾರಂಭದ ಪೂರ್ವದಲ್ಲಿ ಶಿವಬೋಧರಂಗ ಮಠದಿಂದ ಶೋಭಾಯಾತ್ರೆ ಪ್ರಾರಂಭಗೊಂಡಿತು. ವಿವಿಧ ಸಂಪ್ರದಾಯ ವಾದ್ಯಗಳ ವಾದನ, ದಾರಿಯುದ್ದಕ್ಕೂ ರಂಗೋಲಿಗಳ ಚಿತ್ತಾರ, ಎಲ್ಲೆ ಕಡೆಯಲ್ಲಿ ಭಗವಾಧ್ವಜ ಹಾರಾಟವು ಗಮನಸೆಳೆಯಿತ್ತು. ಶೋಭಾಯಾತ್ರೆಯು ಬಸವ ರಂಗಮಂಟಪ ಬಳಿಯಲ್ಲಿ ಸಮಾವೇಶಗೊಂಡಿತು.


Spread the love

About inmudalgi

Check Also

ಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ

Spread the loveಜ.27,28ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮೂಡಲಗಿ: ಪಟ್ಟಣದ ಬಳಿಗಾರ ಓಣಿಯ ಶ್ರೀ ಭದ್ರಕಾಳಿ ಸಮೇತ ವೀರಭದ್ರೇಶ್ವರ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ