ಮೂಡಲಗಿ: ಇಂದಿನ ದಿನಮಾನಗಳಲ್ಲಿ ಸರಕಾರಿ ಸೇವೆ ಸಲ್ಲಿಸುವದುಕಷ್ಟಕರವಾಗಿದೆ. ಕಳೇದ 40ವರ್ಷಗಳಿಂದ ಯಾವದೇಕಪ್ಪು ಚುಕ್ಕೆ ಇಲ್ಲದೇ ಉಪನೋಂಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಓ ಹರಿಯಪ್ಪ ಅವರು ಸೇವಾ ಅವಧಿ ಪೂರ್ಣಗೊಳಿಸಿ ವಯೋನಿವೃತ್ತಿ ಹೊಂದಿದ್ದಾರೆ ಎಂದು ಉಪತಹಶೀಲ್ದಾರ ಪರಸಪ್ಪ ನಾಯ್ಕ ಹೇಳಿದರು.
ಅವರು ಪಟ್ಟಣದ ತಹಶೀಲ್ದಾರ ಕಛೇರಿ ಸಭಾ ಭವನದಲ್ಲಿ
ಶನಿವಾರ ನಡೆದ ಉಪನೋಂದಣಾಧಿಕಾರಿ ಹರಿಯಪ್ಪ ಅವರ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.
ಉಪನೋಂದಣಾಧಿಕಾರಿ ಹರಿಯಪ್ಪ ಮಾತನಾಡಿ, ಸಾರ್ವಜನಿಕರ ಮತ್ತು ಸಿಬ್ಬಂದಿಗಳ ಸಹಕಾರದಿಂದ ಈ ನನ್ನ ಸೇವಾವಧಿ ಪೂರ್ಣಗೋಳಸಲು ಸಾಧ್ಯವಾಗಿದೆ ಎಂದರು.
ಗ್ರೇಡ್-2ತಹಶೀಲ್ದಾರ ಶಿವಾನಂದ ಬಬಲಿ ಅಧ್ಯಕ್ಷತೆ
ವಹಿಸಿದ್ದರು.
ಮೂಡಲಗಿ ತಾಲೂಕಾ ದಸ್ತಾವೇಜು ಬರಹಗಾರರ ಸಂಘದಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಉಪಾಧ್ಯಕ್ಷ ಎಲ್.ಸಿಗಾಡವಿ, ಕಾರ್ಯದರ್ಶಿ ಶಿವಾನಂದ ಗೋಟಡಕಿ ಹಾಗೂ ಪದಾಧಿಕಾರಿಗಳುಹರಿಯಪ್ಪ ಅವರನ್ನು ಸತ್ಕರಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕಂಪ್ಯೂಟರ್ ಆಪ್‍ರೇಟರ್ ರಾಜು ಬಂಡಿವಡ್ಡರ, ಚಿದಾನಂದ ಪರೀಟ್ ಅವರನ್ನ ಸತ್ಕರಿಸಲಾಯಿತು.
ಪ್ರಭಾರಿ ಉಪನೋಂದಣಾಧಿಕಾರಿ ಡಿ.ಕೆ.ಕುಳ್ಳೂರ, ಲಲಿತಾ ಹರಿಯಪ್ಪ, ಪೂಜಾ, ರಂಜೀತ ಹರಿಯಪ್ಪ ವೇದಿಕೆಯ ಮೇಲೆ ಇದ್ದರು.
ಮಲ್ಲಿಕಾರ್ಜುನ ಶಿರಸಂಗಿ, ರಾಜು ಅಥಣಿ, ಶಿವಾನಂದ ಸಸಾಲಟ್ಟಿ, ರಮೇಶ ಮಂಗಸೂಳಿ, ಶ್ರೀಶೈಲ್ ಮಾಳಿ, ಬಸವರಾಜ ಮುಧೋಳ, ಬಸವರಾಜ ಬಿರಾದಾರ, ವಿಶ್ವನಾಥ ಶಿರಸಂಗಿ, ಬಸವರಾಜ ಅಳಗೋಡಿ, ಶಿವಾನಂದ ಸಣ್ಣಕ್ಕಿ, ಅಭಿಷೇಕ ಚಿಂಚಲಿ, ಶೋಯಬ ಥರಥರಿ, ಮಹಾದೇವ ನವಣಿ, ಸಂಜು ಅಂಗಡಿ, ಕುಮಾರ ಜಂಗನವರ, ದರ್ಶನ ಹಟ್ಟಿ, ರವಿ ಶಾಬನ್ನವರ,
ಈರಪ್ಪ ಪಾರ್ಶಿ ಇದ್ದರು.
ಸಂಜಯ ಪಾರ್ಶಿ ನಿರೂಪಿಸಿದರು. ರಮೇಶ ಸನ್ನಮನಿ
ಸ್ವಾಗತಿಸಿದರು. ಮಂಜು ಹುಚ್ಚನವರ ವಂದಿಸಿದರು.
IN MUDALGI Latest Kannada News