Breaking News
Home / ಬೆಳಗಾವಿ / ಫೆ.೧೦ ರಂದು ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

ಫೆ.೧೦ ರಂದು ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

Spread the love

ಫೆ.೧೦ ರಂದು ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ

ಮೂಡಲಗಿ: ಪಟ್ಟಣದ ಶಿಕ್ಷಣ ಪ್ರೇಮಿ ಹಾಗೂ ಸರಕಾರಿ ಪ್ರೌಢ ಶಾಲೆಯ ಭೂ ದಾನಿ ದಿ.ಶ್ರೀ ಕೃಷ್ಣಪ್ಪ ಹ.ಸೋನವಾಲಕರ ಅವರ ೮೨ನೇ ಜನ್ಮ ದಿನಾಚರಣೆ ಅಂಗವಾಗಿ ೧೦ನೇ ಬೃಹತ ಐಚ್ಚಿಕ ರಕ್ತದಾನ ಶಿಬಿರ ಮತ್ತು ಕೆ.ಎಚ್. ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ಮಂಗಳವಾರ ಫೆ.೧೦ ರಂದು ಮುಂಜಾಣೆ ೯ಗಂಟೆಗೆ ಜರುಗಲಿದೆ.
ರಕ್ತದಾನ ಶಿಬಿರವು ಮೂಡಲಗಿಯ ಕೆ.ಎಚ್. ಸೋನವಾಲಕರ ಪ್ರತಿಷ್ಠಾನ, ಬೆಳಗಾವಿಯ ಡಾ|| ಗಿರೀಶ ಸೋನವಾಲಕರ ಫೌಂಡೇಶನ್, ಕೃಷ್ಣಪ್ಪ. ಹ. ಸೋನವಾಲಕರ ಸರಕಾರಿ ಪ್ರೌಢಶಾಲೆ, ಲಕ್ಷ್ಮೀ ಶಿಕ್ಷಣ ಸಂಸ್ಥೆ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ, ಸಮುದಾಯ ಆರೋಗ್ಯ ಕೇಂದ್ರ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕ, ಎಮ್.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ,  ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೂಡಲಗಿ ಮತ್ತು ರೋಟರಿ ರಕ್ತ ಭಂಡಾರ ಗೋಕಾಕ, ಹಾಗೂ ಬೆಳಗಾವಿ ಬೀಮ್ಸ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜರುಗುವ ರಕ್ತದಾನ ಶಿಬಿರ ಜರುಗಲಿದೆ .
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಎರೆಹೊಸಹಳ್ಳಿ ರಡ್ಡಿ ಗುರುಪೀಠದ ಪೀಠಾಧಿಪತಿ ಶ್ರೀ ವೇಮನಾನಂದ ಮಹಾಸ್ವಾಮಿಗಳು ಪಟ್ಟಣದ ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿಗಾಳಾದ  ಶ್ರೀ ದತ್ತಾತ್ರಯಬೋಧ ಸ್ವಾಮಿಗಳು ಶ್ರೀ ಶ್ರೀಧರಬೋಧ ಸ್ವಾಮಿಗಳು ವಹಿಸುವರು.
ನೂತನ ಶಾಲಾ ಕೊಠಡಿಗಳ ಮತ್ತು ರಕ್ತದಾನ ಶಿಬಿರವನ್ನು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ  ಸತೀಶ ಲ. ಜಾರಕಿಹೊಳಿ ಉದ್ಘಾಟಿಸುವರು, ವಿಜ್ಞಾನ ಪ್ರಯೋಗಾಲಯನ್ನು  ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ  ಜಗದೀಶ ಶೆಟ್ಟರ ಉದ್ಘಾಟಿಸುವರು, ಚಿತ್ರಕಲಾ ಕೊಠಡಿ ಉದ್ಘಾಟನೆಯನ್ನು ಶಾಸಕ ಹಾಗೂ ಬೆಮೂಲ್ ಅಧ್ಯಕ್ಷ  ಬಾಲಚಂದ್ರ ಲ. ಜಾರಕಿಹೊಳಿ ಅವರು ಮತ್ತು ಕ್ರೀಡಾ ಕೊಠಡಿಯನ್ನು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ,  ಗ್ರಂಥಾಲಯ ಉದ್ಘಾಟನೆಯನ್ನು ಜಿ.ಪಂ ಸಿಇಒ ರಾಹುಲ ಶಿಂಧೆ ನೆರವೇರಿಸುವರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳಗಾವಿ ಡಾ ಗಿರೀಶ ಕೃ. ಸೋನವಾಲಕರ ಫೌಂಡೇಶನ್ ಅಧ್ಯಕ್ಷ ಡಾ.ಗಿರೀಶ ಕೃ. ಸೋನವಾಲಕರ ವಹಿಸುವರು, ಮುಖ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮೀಬಾಯಿ ಕೃ. ಸೋನವಾಲಕರ, ಚಿಕ್ಕೋಡಿ ಡಿಡಿಪಿಐ  ಸೀತಾರಾಮ ಆರ್. ಎಸ್, ಬಾಗಲಕೋಟ ಡಿಡಿ.ಪಿ.ಐ ಅಜೀತ ಮನ್ನಿಕೇರಿ, ಜಿಲ್ಲಾ ನಿವೃತ್ತ ಆರೋಗ್ಯಾಧಿಕಾರಿ ವಿ.ಡಿ.ಡಾಂಗಿ, ತಹಶೀಲ್ದಾರ ಶ್ರೀಶೈಲ ಗುಡಮೆ, ತಾ.ಪಂ ಇಒ ಎಫ್.ಜಿ.ಚಿನ್ನಣ್ಣವರ, ಬಿಇಒ ಪಿ.ಬಿ. ಹಿರೇಮಠ, ಬಿಜೆಪಿ ಬೆಳಾಗಾವಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ,  ಬೀಮ್ಸ್ ರಕ್ತ ಭಂಡಾರದ ಶ್ರೀದೇವಿ ಬೊಬಾಟಿ, ತಾಲೂಕಾ ಆರೋಗ್ಯಾಧಿಕಾರಿ ಡಾ|| ಮುತ್ತಣ್ಣಾ ಕೊಪ್ಪದ, ಸಿಪಿಐ  ಶ್ರೀಶೈಲ ಬ್ಯಾಕೂq, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭಾರತಿ ಬಿ.ಕೋಣಿ.  ಗೋಕಾಕ ರೋಟರಿ ರಕ್ತ ಭಂಡಾರ ಅಧ್ಯಕ್ಷ ಮಲ್ಲಕಾರ್ಜುನ ಕಲ್ಲೋಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ  ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಕೃಷ್ಣಪ್ಪ ಗಿರೆಣ್ಣವರ, ಲಯನ್ಸ್ ಪರಿವಾರದ ಅಧ್ಯಕ್ಷ  ವಿಶಾಲ ಶೀಲವಂತ,  ಮೂಡಲಗಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಸುರೇಶ ಚಿತ್ರಗಾರ, ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸ.ಪ್ರ.ದ. ಕಾಲೇಜ ಪ್ರಾಂಶುಪಾಲ ಪ್ರೊ. ಮಹೇಶ ಕಂಬಾರ ಭಾಗವಹಿಸುವರು ಎಂದು ಸಂತೋಷ ಸೋನವಾಲಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

‘ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು’- ಭರಮಣ್ಣ ಉಪ್ಪಾರ

Spread the love‘ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು’- ಭರಮಣ್ಣ ಉಪ್ಪಾರ ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ