ಬೆಳಗಾವಿ ಜಿಲ್ಲೆಯನ್ನು ಇಂದು ಕೊರೊನಾ ದಾಖಲೆ ಮಟ್ಟದಲ್ಲಿ ಕಾಡಲಿದೆ. ಅಥಣಿ, ರಾಯಬಾಗ, ರಾಮದುರ್ಗ ಗೋಕಾಕ, ಖಾನಾಪೂರ, ಬೈಲಹೊಂಗಲ ತಾಲೂಕುಗಳಲ್ಲಿ ಕೊರೋನಾ ಅವಿರತವಾಗಿ ಕಾಡಲು ಪ್ರಾರಂಭಿಸಿದೆ.
ಗೋಕಾಕ :
ತಾಲೂಕಿನ ಮಾಲದಿನ್ನಿ ಗ್ರಾಮದ 28 ವರ್ಷದ ಮಹಿಳೆಯಲ್ಲಿ ಕೋರೊನಾ ಸೋಂಕು ದೃಢವಾಗಿದೆ ಗೋಕಾಕ್ ತಹಶೀಲ್ದಾರ್ ತಿಳಿಸಿದ್ದಾರೆ.
ಅಥಣಿ :
ಅಥಣಿಯಲ್ಲಿ ಇಂದು 39 ಜನರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ
ಈಗಾಗಲೇ ಶತಕದ ಹಾದಿ ದಾಟಿದ್ದ ಅಥಣಿಯಲ್ಲಿ
ಒಟ್ಟು 150 ಕ್ಕೂ ಹೆಚ್ಚುಪ್ರಕರಣ ಕಂಡು ಬಂದಂತಾಗಿವೆ. ತಾಲೂಕಿನ ಮಾಯನಟ್ಟಿ , ಪಾರ್ಥನಹಳ್ಳಿ, ಗುಂಡೆವಾಡಿ ಮುಂತಾದ ಗ್ರಾಮಗಳಿ ಹರಡಿದೆ.
ರಾಯಬಾಗ :
ರಾಯಬಾಗದಲ್ಲಿ ಇಂದು 15 ಕೊರೊನಾ ಪಾಸಿಟಿವ್ ವರದಿಯಾಗಿವೆ. ರಾಯಬಾಗ ನಗರ,ಅಳಗವಾಡಿ, ಮೇಕಲಿ,ಚಿಂಚಲಿ, ಹಂದಿಗುಂದ, ನಂದಿಕುಳ್ಳಿ,ಕುಡಚಿ ಪಟ್ಟಣ ಗಳಲ್ಲಿ ಕೊರೊನಾ ತನ್ನ ಕೈಚಾಚಿದೆ
ರಾಮದುರ್ಗ :
ರಾಮದುರ್ಗನಲ್ಲಿ 10 ಕೋರೊನಾ ಸೋಂಕಿತರು ಪತ್ತೆಯಾಗಿದ್ದುತಾಲೂಕಿನ ಸಂಗಳ, ಸುರೇಬಾನ್ ಗ್ರಾಮಗಳಿಗೆ ಕೋರೊನಾ ವಕ್ಕರಿಸಿದೆ.
ಖಾನಾಪೂರ :
ಖಾನಾಪೂರ ನಗರದಲ್ಲಿ ಇಂದು ೧ ಕೊರೊನಾ ಪಾಸಿಟಿವ್ ದೃಢವಾಗಿವೆ.
ಬೈಲಹೊಂಗಲ :
ತಾಲೂಕಿನಲ್ಲಿ ಗುರುವಾರ ಎರಡು ಕೊರೋನಾ ಪಾಸಿಟಿವ ದೃಡ.